ಉಡುಪಿ :ರಾಷ್ಟ್ರೀಯ ಗ್ರಾಹಕರ ದಿನಾಚರಣೆ
ಉಡುಪಿ: ಇಲ್ಲಿನ ಕಡಿಯಾಳಿ ಕಮಲಾ ಬಾಯಿ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಕಾರ್ಯಕ್ರಮವನ್ನು ಸೋಮವಾರ ಆಯೋಜಿಸಲಾಯಿತು. ಕಾರ್ಯಕ್ರಮವನ್ನು ಕಮಲಾ ಬಾಯಿ ಹೈಸ್ಕೂಲ್‍ನ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಲತಾ ಆನಂದ ಶೇರೆಗಾರ್ ಉದ್ಘಾಟಿಸಿ, ಗ್ರಾಹಕರು ವಸ್ತುಗಳನ್ನು ಖರೀದಿಸುವ ಮುನ್ನ ಸಮಗ್ರವಾಗಿ ಪರಿಶೀಲಿಸಬೇಕು. ಪ್ಯಾಕೆಟ್ ಮೇಲಿನ ಅವಧಿ ಮೀರುವ ದಿನಾಂಕ, ಉತ್ಪಾದನಾ ದಿನಾಂಕಗಳನ್ನು ಪರಿಶೀಲಿಸಿ ವಸ್ತುಗಳನ್ನು ಖರೀದಿಸಬೇಕು. ಖರೀದಿಸುವ ವಸ್ತುಗಳಲ್ಲಿ ಯಾವುದೇ ದೋಷಗಳಿದ್ದರೆ ಗ್ರಾಹಕ ವೇದಿಕೆಗಳ ಮೂಲಕ ದೂರು ದಾಖಲಿಸಿ ಪರಿಹಾರ ಪಡೆಯಬಹುದಾಗಿದ್ದು, ವ್ಯಾಪಾರಿಗಳಿಂದ ಮೋಸ ಹೋಗದಂತೆ ಸದಾ […]