ಕಾಪು ಬೀಚ್ ನಲ್ಲಿ ಇಬ್ಬರು ಯುವಕರು ನೀರುಪಾಲು: ಓರ್ವನ ಮೃತದೇಹ ಪತ್ತೆ
ಕಾಪು: ಕಾಪು ಬೀಚ್ ನಲ್ಲಿ ಈಜಲು ಇಳಿದ ಇಬ್ಬರು ಯುವಕರು ನೀರುಪಾಲಾದ ಘಟನೆ ಇಂದು ಸಂಜೆ ಸಂಭವಿಸಿದೆ. ಬೆಂಗಳೂರಿನ ಕಾರ್ತಿಕ್ ಮತ್ತು ರೂಪೇಶ್ ನೀರುಪಾಲಾದ ಯುವಕರು. ಇವರಲ್ಲಿ ರೂಪೇಶ್ ಎಂಬಾತನ ಮೃತದೇಹ ಪತ್ತೆಯಾಗಿದೆ. ಬೆಂಗಳೂರಿನಿಂದ ಪ್ರವಾಸಕ್ಕೆ ಬಂದ 5 ಮಂದಿ ಯುವಕರ ತಂಡ ಕಾಪು ಬೀಚ್ ನಲ್ಲಿ ಆಟವಾಡುತ್ತಿದ್ದು, ಇದೇ ವೇಳೆ ದುರ್ಘಟನೆ ನಡೆದಿದೆ ಎನ್ನಲಾಗಿದೆ. ಸಮುದ್ರದ ನೀರಿನಲ್ಲಿ ಮುಳುಗಿದ್ದ ರೂಪೇಶ್ ನನ್ನು ಬೀಚ್ ನಿರ್ವಾಹಕ ಪ್ರಶಾಂತ್ ಕರ್ಕೇರ, ವಿನೀತ್, ಪ್ರಥಮ್, ದಮೋದರ ಪುತ್ರನ್, ಚಂದ್ರಹಾಸ ಅವರು […]