ತುಳು ಶಿವಳ್ಳಿ ಬ್ರಾಹ್ಮಣರ ಪ್ರಥಮ ವಿಶ್ವ ಸಮ್ಮೇಳನ: ವಿವಿಧ ಗೋಷ್ಠಿಗಳಿಗೆ ಚಾಲನೆ

ಉಡುಪಿ:  ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ  ತುಳು ಶಿವಳ್ಳಿ ಬ್ರಾಹ್ಮಣರ ಪ್ರಥಮ ವಿಶ್ವ ಸಮ್ಮೇಳನದ ತುಳು ಶಿವಳ್ಳಿ ಸಮಾಜ ಅಂದು-ಇಂದು-ಮುಂದು ಸಮಾವೇಶದಲ್ಲಿ ಸುಬ್ರಹ್ಮಣ್ಯ ಮಠಾಧೀಶರಾದ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು,ಹಿಂದಿನ  ಹಿರಿಯರಿಂದ ಇಂದಿನ ಕಿರಿಯರವರೆಗಿನ ಆಹಾರ ಪದ್ದತಿ,ಜೀವನ ಪದ್ದತಿ,ಗುರು ಮಠಗಳ ನಡುವೆ ಇಟ್ಟುಕೊಂಡಿರುವ  ಸಂಭಂದಗಳ ರೀತಿ, ಸಮಾಜದಲ್ಲಿ ತೊಡಗಿಸಿ ಕೊಳ್ಳುವ ರೀತಿಯ ಬಗ್ಗೆ ವಿಸ್ತಾರವಾಗಿ ತಿಳಿಸಿದರು. ಉಡುಪಿಯ ಶ್ರೀಪತಿ ತಂತ್ರಿ,ರವೀಶ್ ತಂತ್ರಿ ಕುಂಟಾರ್,ಉಡುಪಿಯ ಬಾಲಾಜಿ ರಾಘವೇಂದ್ರ ಆಚಾರ್ಯ,ತು.ಶಿ.ಮ.ಮ ದ ಅಧ್ಯಕ್ಷರಾದ ಅರವಿಂದ ಆಚಾರ್,ಉಜಿರೆಯ ಡಾ.ದಯಾಕರ್ ಎಂ.ಎಂ, ಪುತ್ತೂರಿನ […]