ಅ.22 ರಂದು ಶಕಲಕ ಬೂಮ್ ಬೂಮ್ ಶೀರ್ಷಿಕೆ ಹಾಡು ಬಿಡುಗಡೆ

ಉಡುಪಿ: ದೀಪಾವಳಿಯ ಶುಭ ಸಂದರ್ಭದಲ್ಲಿ ಅ.22 ರಂದು ಶಕಲಕ ಬೂಮ್ ಬೂಮ್ ತುಳು ಹಾರರ್, ಕಾಮಿಡಿ , ಸಸ್ಪೆನ್ಸ್ ಚಿತ್ರದ ಶೀರ್ಷಿಕೆ ಹಾಡನ್ನು ಉಡುಪಿಯ ಶಾಸಕ ಕೆ. ರಘುಪತಿ ಭಟ್ ರವರು ಜಸ್ಟ್ ರೋಲ್ ಫಿಲ್ಮ್ ಯುಟ್ಯೂಬ್ ಚಾನಲ್ ನಲ್ಲಿ ಬಿಡುಗಡೆ ಮಾಡಲಿರುವರು. ಹಾಡಿನ ಸಾಹಿತ್ಯವನ್ನು ಪ್ರಶಾಂತ್ ಸಿಕೆ ಬರೆದಿದ್ದರೆ ಸಂಗೀತ ಸಂಯೋಜನೆಯನ್ನು ಡಾಲ್ವಿನ್ ಕೊಳಲಗಿರಿ ಮಾಡಿದ್ದಾರೆ. ಸಂಕಲನಕಾರರಾಗಿ ಪ್ರಜ್ವಲ್ ಸುವರ್ಣ ದುಡಿದಿದ್ದಾರೆ. ಚಿತ್ರವು ಡಿ.16 ರಂದು ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ.

ಶಕಲಕ ಬೂಂ ಬೂಂ ಹಾರರ್ ಕಾಮಿಡಿ ಥ್ರಿಲ್ಲರ್ ಚಲನಚಿತ್ರದ ನಾಯಕ, ನಾಯಕಿಯ ಪೋಸ್ಟರ್ ಬಿಡುಗಡೆ

ಮಂಗಳೂರು: ಡಿಸೆಂಬರ್ 16 ರಂದು ಬಿಡುಗಡೆಗೊಳ್ಳಲಿರುವ ಈ ಚಲನಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅನ್ನು ಶ್ರೀ ಮಂಗಳಾದೇವಿ ದೇವಸ್ಥಾನ ಮಂಗಳೂರು ಓ ಸಿ ಸ್ಟಾರ್ ನೈಟ್ ಕಾರ್ಯಕ್ರಮದಲ್ಲಿ ತುಳು ಮತ್ತು ಕನ್ನಡ ನಟ ವಿನೀತ್ ಕುಮಾರ್ ಮತ್ತು ಮಾಜಿ ಶಾಸಕ ರಮನಾಥ್ ರೈ ಅವರು ಬಿಡುಗಡೆಗೊಳಿ ಶುಭ ಹಾರೈಸಿದರು. ಯು.ಎನ್ ಸಿನೆಮಾಸ್ ಬ್ಯಾನರ್ ನಡಿ ಮೂಡಿಬರುವ ಈ ಚಲನಚಿತ್ರವನ್ನು ಶ್ರೀಶ ಎಳ್ಳಾರೆ ನಿರ್ದೇಶನ ಮಾಡಿದ್ದಾರೆ. ನಿತ್ಯಾನಂದ ನರಸಿಂಗೆ, ಉಮೇಶ್ ಪ್ರಭು ಮಣಿಬೆಟ್ಟು ನಿರ್ಮಾಪಕರಾಗಿದ್ದಾರೆ ಹಾಗೂ ಡಾಲ್ವಿನ್ ಕೊಳಲಗಿರಿ ಚಿತ್ರದ […]

ತುಳುನಾಡಿನ ಮೊದಲ ತುಳು ಹಾರರ್ ಚಲನಚಿತ್ರ ಶಕಲಕ ಬೂಂ ಬೂಂ ಡಿಸೆಂಬರ್ 16 ರಂದು ಬಿಡುಗಡೆ

ಉಡುಪಿ: ಬಹುನಿರೀಕ್ಷಿತ ಶಕಲಕ ಬೂಂ ಬೂಂ ಹಾರರ್ ಚಿತ್ರದ ಪೋಸ್ಟರ್ ಅನ್ನು ಸೆ. 26 ರಂದು ಸಂಜೆ 6 ಗಂಟೆಗೆ ಶ್ರೀ ನರಸಿಂಹ ದೇವಸ್ಥಾನ ನರಸಿಂಗೆ ಇಲ್ಲಿ ದೇವಳದ ಆಡಳಿತ ಮೊಕ್ತೇಸರರಾದ ರಮೇಶ್ ಸಲ್ವಾನ್ಕಾರ್ ಬಿಡುಗಡೆ ಗೊಳಿಸಿದರು. ಚಲನಚಿತ್ರವು ಡಿಸೆಂಬರ್ 16 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳ್ಳಲಿದೆ ಎಂದು ಈ ಸಂದರ್ಭದಲ್ಲಿ ಘೋಷಿಸಲಾಯಿತು. ಅತಿಥಿಗಳಾಗಿ ಭಾಗವಹಿಸಿದ್ದ ದೇವಳದ ಅಧ್ಯಕ್ಷ ಎಸ್ ಗೋಪಾಲಕೃಷ್ಣ ನಾಯಕ್, ಆನಂದ ನಾಯಕ್ ಆರ್ಬಿ, ಶ್ರೀ ದುರ್ಗಾಪರಮೇಶ್ವರಿ ಸೊಸೈಟಿಯ ಅಧ್ಯಕ್ಷ ಅಶೋಕ ಕಾಮತ್ ಕೋಡಂಗೆ, ಡಾ. […]

ಜ.೧೧ಕ್ಕೆ ‘ದೇಯಿ ಬೈದಿತಿ – ಗೆಜ್ಜೆ ಗಿರಿ ನಂದನೊಡು’ ಚಿತ್ರ ತೆರಿಗೆ

ಉಡುಪಿ: ತುಳುನಾಡಿನ ವೀರ ಪುರುಷರಾದ ಕೋಟಿ ಚೆನ್ನಯರ ತಾಯಿ ದೇಯಿ ಬೈದಿತಿ ಅವರ ಜೀವನದ ಕಥೆ ಆದರಿತ ‘ದೇಯಿ ಬೈದೆತಿ– ಗೆಜ್ಜೆ ಗಿರಿ ನಂದನೊಡು’ ಚಿತ್ರ ಜನವರಿ ೧೧ಕ್ಕೆ ತೆರೆಗೆ ಬರಲಿದೆ. ಈ ಚಿತ್ರವನ್ನು ವೀಕ್ಷಿಸಿದ ಸೆನ್ಸಾರ್ ಮಂಡಳಿ ಭಾರಿ ಮೆಚ್ಚುಗೆ ವ್ಯಕ್ತಪಡಿಸಿ ಯು ಪ್ರಮಾಣಪತ್ರವನ್ನು ನೀಡಿದ್ದಾರೆ. ದೇಯಿ ಪಟ್ಟ ಶ್ರಮದ ಚಿತ್ರ ಐನೂರು ವರ್ಷಗಳ ಹಿಂದೆ ಓರ್ವ ಮಹಿಳೆ ತನ್ನ ನಾಡಿಗೋಸ್ಕರ ಯಾವ ರೀತಿ ತನ್ನ ಜೀವನವನ್ನೇ ಬಲಿದಾನ ಮಾಡುತ್ತಾರೆ ಎನ್ನುವುದೇ ಚಿತ್ರದ ಥೀಮ. ಕೋಟಿ-ಚೆನ್ನಯರ […]