ತ್ರಿಶಾ ಕ್ಲಾಸಸ್: ಸಿಎ ಇಂಟರ್ಮೀಡಿಯೇಟ್ ಪರೀಕ್ಷೆಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಸನ್ಮಾನ
ಉಡುಪಿ: ಅಖಿಲ ಭಾರತ ಮಟ್ಟದಲ್ಲಿ ಇದೇ ಜುಲೈ ತಿಂಗಳಲ್ಲಿ ನಡೆದ ಸಿಎ ಇಂಟರ್ಮೀಡಿಯೇಟ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳನ್ನು ಕಟಪಾಡಿಯ ತ್ರಿಶಾ ವಿದ್ಯಾ ಕಾಲೇಜಿನಲ್ಲಿ ಶುಕ್ರವಾರ ಅಭಿನಂದಿಸಲಾಯಿತು. ತ್ರಿಶಾ ಸಮೂಹ ಸಂಸ್ಥೆಗಳ ಸಂಸ್ಥಾಪಕ ಸಿ.ಎ ಗೋಪಾಲಕೃಷ್ಣ ಭಟ್ ಮಾತನಾಡಿ, ಎಡವಿದಾಗ ಮತ್ತೆ ಎದ್ದು ನಿಂತು ಗುರಿಯ ಕಡೆಗೆ ಸಾಗಿದರೆ ಮಾತ್ರ ನಮ್ಮಿಂದ ಸಾಧನೆ ಮಾಡಲು ಸಾಧ್ಯ. ಸಿ.ಎ ಇಂಟರ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ ಆರ್ಟಿಕಲ್ ಶಿಪ್ ನಲ್ಲಿ ನಮ್ಮ ಪ್ರಾಯೋಗಿಕ ಕೆಲಸಗಳು ಆರಂಭವಾಗುತ್ತವೆ. ಇಷ್ಟು ದಿನ ಕಲಿತ […]