ತ್ರಿಶಾ ಕ್ಲಾಸಸ್: ಸಿಎ ಇಂಟರ್ಮೀಡಿಯೇಟ್ ಪರೀಕ್ಷೆಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಸನ್ಮಾನ

ಉಡುಪಿ: ಅಖಿಲ ಭಾರತ ಮಟ್ಟದಲ್ಲಿ ಇದೇ ಜುಲೈ ತಿಂಗಳಲ್ಲಿ ನಡೆದ ಸಿಎ ಇಂಟರ್ಮೀಡಿಯೇಟ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳನ್ನು ಕಟಪಾಡಿಯ ತ್ರಿಶಾ ವಿದ್ಯಾ ಕಾಲೇಜಿನಲ್ಲಿ ಶುಕ್ರವಾರ ಅಭಿನಂದಿಸಲಾಯಿತು.

ತ್ರಿಶಾ ಸಮೂಹ ಸಂಸ್ಥೆಗಳ ಸಂಸ್ಥಾಪಕ ಸಿ.ಎ ಗೋಪಾಲಕೃಷ್ಣ ಭಟ್ ಮಾತನಾಡಿ, ಎಡವಿದಾಗ ಮತ್ತೆ ಎದ್ದು ನಿಂತು ಗುರಿಯ ಕಡೆಗೆ ಸಾಗಿದರೆ ಮಾತ್ರ ನಮ್ಮಿಂದ ಸಾಧನೆ ಮಾಡಲು ಸಾಧ್ಯ. ಸಿ.ಎ ಇಂಟರ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ ಆರ್ಟಿಕಲ್ ಶಿಪ್ ನಲ್ಲಿ ನಮ್ಮ ಪ್ರಾಯೋಗಿಕ ಕೆಲಸಗಳು ಆರಂಭವಾಗುತ್ತವೆ. ಇಷ್ಟು ದಿನ ಕಲಿತ ವಿಚಾರಗಳನ್ನು ಪ್ರಯೋಗಕ್ಕೆ ಒಡ್ಡುವ ದಿನಗಳು ಮುಂದಿರುತ್ತದೆ ಎಂದರು.

ತ್ರಿಶಾ ವಿದ್ಯಾ ಕಾಲೇಜ್ ಆಫ್ ಕಾಮರ್ಸ್ ಆಂಡ್ ಮ್ಯಾನೇಜ್ಮೆಂಟ್ ನ ಪ್ರಾಂಶುಪಾಲ ಗುರುಪ್ರಸಾದ್ ರಾವ್ ಮಾತನಾಡಿ, ಮುಂದಿನ ಹಂತದಲ್ಲಿ ಜೀವನಕ್ಕೆ ಅವಶ್ಯಕವಾದ ಕೌಶಲ್ಯ ಗಳನ್ನು ರೂಪಿಸಿಕೊಳ್ಳಬೇಕಾದ ಅಗತ್ಯ ಇದೆ ಎಂದರು.

ಈ ಸಂದರ್ಭದಲ್ಲಿ ಸಿಎ ಇಂಟರ್ಮೀಡಿಯೇಟ್ ಪರೀಕ್ಷೆಯಲ್ಲಿ ಉತ್ತೀರ್ಣರಾದ 51 ವಿದ್ಯಾರ್ಥಿಗಳನ್ನು ಸನ್ಮಾನಿಸಿ, ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು. ಇದೇ ವೇಳೆ ಅಖಿಲ ಭಾರತ ಮಟ್ಟದಲ್ಲಿ ನಡೆದ ಸಿಎ ಫೈನಲ್ ಪರೀಕ್ಷೆಯಲ್ಲಿ ತೇರ್ಗಡೆಯಾದ ಪ್ರಥಮ ಎಸ್ ಸಾಲಿಯಾನ್ ಹಾಗೂ ಅಬಿದ್ ಮೊಹಮದ್ ಇವರನ್ನೂ ಸನ್ಮಾನಿಸಲಾಯಿತು.

ಸಭೆಯಲ್ಲಿ ಸಿದ್ಧಾಂತ್ ಫೌಂಡೇಶನ್ ಟ್ರಸ್ಟಿ ನಮಿತಾ ಜಿ ಭಟ್ ಹಾಗೂ ರಾಮ್ ಪ್ರಭು, ಶೈಕ್ಷಣಿಕ ಮುಖ್ಯಸ್ಥೆ ಪ್ರತಿಭಾ ನಾಯಕ್, ತ್ರಿಶಾ ಸಂಧ್ಯಾ ಕಾಲೇಜಿನ ಪ್ರಾಂಶುಪಾಲರಾದ ಇಂದು ರೀತಿ , ತ್ರಿಶಾ ಕ್ಲಾಸಸ್ ಉಡುಪಿಯ ಮುಖ್ಯಸ್ಥ ಮಹೇಶ್ ಭಟ್, ವಿದ್ಯಾರ್ಥಿಗಳು, ಹೆತ್ತವರು, ಶಿಕ್ಷಕ ವೃಂದದವರು ಉಪಸ್ಥಿತರಿದ್ದರು. ಗೌರಿ ಕಾಮತ್ ನಿರೂಪಿಸಿ, ಪ್ರತಿಭಾ ನಾಯಕ್ ವಂದಿಸಿದರು.

ದೇಶಕ್ಕೆ ಪ್ರಥಮ ರ‍್ಯಾಂಕ್ ಗಳಿಸಿದ ರುತ್ ಕ್ಲಾರ್ ಡಿಸೋಜಗೆ ಅಭಿನಂದನೆ:
ಮಂಗಳೂರಿನ ತ್ರಿಶಾ ಕ್ಲಾಸಸ್ ನಲ್ಲಿ ಅಖಿಲ ಭಾರತ ಮಟ್ಟದಲ್ಲಿ ಸಿಎ ಫೈನಲ್ ಪರೀಕ್ಷೆಯಲ್ಲಿ ದೇಶಕ್ಕೆ ಪ್ರಥಮ ರ‍್ಯಾಂಕ್ ಪಡೆದ ರುತ್ ಕ್ಲಾರ್ ಡಿಸೋಜ ಅವರನ್ನು ಅಭಿನಂದಿಸಲಾಯಿತು. ರುತ್ ಅವರು ತಮ್ಮ ಸಿಎ – ಸಿಪಿಟಿ ತರಬೇತಿ ಹಾಗೂ ಸಿಎ ಐಪಿಸಿಸಿ ತರಬೇತಿಯನ್ನು ತ್ರಿಶಾ ಕ್ಲಾಸಸ್ ಮಂಗಳೂರಿನಲ್ಲಿ ಪಡೆದಿದ್ದರು. ಇದು ಸಂಸ್ಥೆಗೆ ಹೆಮ್ಮೆಯ ವಿಷಯವಾಗಿದ್ದು, ರುತ್ ಅವರಿಗೆ ಪಾರಿತೋಷಕ ಹಾಗೂ ₹75000 ಮೌಲ್ಯದ ಲಾಪ್ ಟಾಪ್ ಅನ್ನು ನೀಡುವ ಮೂಲಕ ಅವರನ್ನು ಸನ್ಮಾನಿಸಲಾಯಿತು. ರುತ್ ಅವರ ಸಾಧನೆ ಅನೇಕ ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾಯಿತು.

ಐಸಿಎಐ ನಡೆಸಿದ ಅಖಿಲ ಭಾರತ ಮಟ್ಟದ ಸಿಎ ಇಂಟರ್ಮೀಡಿಯೇಟ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದವರು:
ಗ್ರೂಪ್ 1 ಪರೀಕ್ಷೆಯಲ್ಲಿ ತೇರ್ಗಡೆಯಾದ ತ್ರಿಶಾ ಕ್ಲಾಸಸ್ ನ ವಿದ್ಯಾರ್ಥಿಗಳು: ಅಂಕಿತಾ, ಅಸ್ಥಿಕ್ ಜೋಗಿ, ಕೆ ಚೇತನ ಭಟ್, ಪ್ರಥ್ವಿಕ್ ಎಲ್ ನಾರಾಯಣ್, ಶ್ರೀಲತಾ, ಸೌರಭ್ ಬಿ ಶೆಟ್ಟಿ, ಸುಜೀತ್ ಕುಮಾರ್ ಯು ಜಿ, ವನಿತಾ ತಿಮ್ಮಣ್ಣ ಭಟ್, ಹರ್ಷಿತ್.

ಗ್ರೂಪ್ 1 ಪರೀಕ್ಷೆಯಲ್ಲಿ ತೇರ್ಗಡೆಯಾದ ತ್ರಿಶಾ ವಿದ್ಯಾ ಕಾಲೇಜಿನಲ್ಲಿ ಬಿಕಾಂ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು: ಅಭಿಲಾಷ್ ಡಿ, ಅಮೀಶ ಶೆಟ್ಟಿ, ಎ ಅನಂತ್ ನಾಯಕ್, ಅಥರ್ವ ನಾಯಕ್, ಹೀನಾ ಕೌಸರ್, ಲೆನಿಸ್ಸಾ ಜೇನ್ ಡಿಸೋಜಾ, ನಾಗೇಂದ್ರ ಕಾಮತ್, ನೇಹಾ ಎಸ್ ಪೂಜಾರಿ, ನಿಖಿತಾ, ಪ್ರಜ್ವಲ್ ಕೆದ್ಲಾಯ, ಸಂಜನಾ ಎನ್ ಹುಲೇಕಲ್, ಶ್ರೇಯಾ ಪ್ರಭು, ಶ್ರೇಯಾ ಶ್ರೀಧರ್ ಭಂಡಾರಿ, ಸೃಷ್ಠಿ ಶೆಟ್ಟಿ, ಶ್ರೀ ಲಕ್ಷ್ಮಿ ಎಂ ಬಿ, ಶ್ರೀಕೃಷ್ಣ ಹೆಚ್ ವಿ, ಸುಧನ್ವ ಶಾನಭಾಗ, ತಶ್ವಿನಿ ಪೂಜಾರಿ, ವರ್ಷ ಪೂಜಾರಿ, ವಿದ್ಯಾಶ್ರೀ, ವಿನಯ್ ಪಾಟೀಲ್ ಎ.

ಗ್ರೂಪ್ 2 ಪರೀಕ್ಷೆಯಲ್ಲಿ ತೇರ್ಗಡೆಯಾದ ತ್ರಿಶಾ ಕ್ಲಾಸಸ್ ನ ವಿದ್ಯಾರ್ಥಿಗಳು: ಸಂಪನ್ ಶೆಟ್ಟಿ, ಸಾನಿಧ್ಯ ಪೂಂಜಾ, ಶ್ರದ್ಧಾ ಕಾಮತ್, ಶ್ವೇತಾ ಶೆಟ್ಟಿ.

ಗ್ರೂಪ್ 2 ಪರೀಕ್ಷೆಯಲ್ಲಿ ತೇರ್ಗಡೆಯಾದ ತ್ರಿಶಾ ವಿದ್ಯಾ ಕಾಲೇಜಿನಲ್ಲಿ ಬಿಕಾಂ ವ್ಯಾಸಂಗ ಮಾಡುತ್ತಿರುವ  ವಿದ್ಯಾರ್ಥಿಗಳು: ಅಲ್ಫಿಯಾ ಬಾನು, ಚೈತ್ರ ಪೈ, ಕೌಶಿಕ್ ಯು ಪಿ, ಮಲ್ಲಿಕಾ ಸಂಜಯ್ ಪ್ರಭು, ನಾಗರಕ್ಷೀತ್ ಬಿ ಎಂ, ನಿತೀಶ್ ವಿ ಪ್ರಭು, ಪ್ರಜ್ವಲ್ ಟಿ ಎಸ್, ಶ್ರಾವ್ಯ ಆರ್ ಪೂಜಾರಿ,ಶ್ರೇಯಾ ಶ್ರೀಧರ್ ಸಾಲಿಯಾನ್, ಶ್ರೇಯಾ, ಸೂಕ್ಷ್ಮ ಎಸ್ ಆಚಾರ್ಯ, ತಾನಿಶ್ ವಿ ಗುಜರನ್, ತೇಜಸ್ವಿನಿ ಕಾಮತ್, ವೈಷ್ಣವಿ ಹೆಗ್ಡೆ, ವೈಷ್ಣವಿ ವಿ ಪೈ, ವಿನಾಯಕ್ ಕಾಮತ್ ಕೆ.

ಸಿಎ ಇಂಟರ್ಮೀಡಿಯೇಟ್ ಪರೀಕ್ಷೆಯ ಎರಡೂ ಗ್ರೂಪ್ ಗಳಲ್ಲಿ ತೇರ್ಗಡೆ ಹೊಂದಿದವರು: ತ್ರಿಶಾ ವಿದ್ಯಾ ಕಾಲೇಜಿನ ನಿಶಾ ಜೆ ಕುಂದರ್ ಹಾಗೂ ತ್ರಿಶಾ ಕ್ಲಾಸಸ್ ನ ವಿದ್ಯಾರ್ಥಿಗಳಾದ ಪ್ರಮೋದ್ ಕೆ ಶೆಣೈ, ನಾಹಿದ್, ಪ್ರೀತಂ ಪೈ, ರಚನಾ ಡಿ ಭಟ್ ಜಿ.