ಮುಷ್ಕರ ಹಿಂಪಡೆಯಲು ಸಾರಿಗೆ ನೌಕರರು ನಿರ್ಧಾರ: ಮಧ್ಯಾಹ್ನ ಸರ್ಕಾರಿ ಬಸ್ ಗಳು ರಸ್ತೆಗಿಳಿಯುವ ಸಾಧ್ಯತೆ
ಬೆಂಗಳೂರು: ದಿಢೀರ್ ನಡೆದ ಬೆಳವಣಿಗೆಯಿಂದಾಗಿ ಕಳೆದ ಮೂರು ದಿನಗಳಿಂದ ಸಾರಿಗೆ ನೌಕರರು ನಡೆಸುತ್ತಿದ್ದ ಮುಷ್ಕರ ಹಿಂಪಡೆಯಲು ನಿರ್ಧರಿಸಿದ್ದಾರೆ. ಅಧಿಕೃತ ಘೋಷಣೆ ಮಾಡಲು ಮಾತ್ರ ಬಾಕಿ ಇದೆ. ಸರ್ಕಾರಿ ನೌಕರರನ್ನಾಗಿ ಪರಿಗಣಿಸುವಂತೆ ಒತ್ತಾಯಿಸಿ ಸಾರಿಗೆ ನೌಕರರು ಕಳೆದ ಮೂರು ದಿನಗಳಿಂದ ಮುಷ್ಕರ ನಡೆಸುತ್ತಿದ್ದರು. ಭಾನುವಾರ ಸಂಜೆ ಸಾರಿಗೆ ಸಚಿವ ಲಕ್ಷ್ಮಣ ಸವದಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕಂದಾಯ ಸಚಿವ ಆರ್. ಅಶೋಕ್ ಸಹಿತ ಇತರ ಸಚಿವರೊಂದಿಗೆ ಸಾರಿಗೆ ನೌಕರರ ಮುಖಂಡರು ನಡೆಸಿದ ಸಭೆ ವಿಫಲಗೊಂಡಿತ್ತು. ಅಲ್ಲದೆ, ಸೋಮವಾರ […]