ಹೈಕಮಾಂಡ್ ಗೆ ಬೆದರಿಕೆ ಹಾಕಿ ಬೊಮ್ಮಾಯಿ ಸಿಎಂ ಮಾಡಿದ್ದಾರೆ: ಯತ್ನಾಳ್ ಗಂಭೀರ ಆರೋಪ

ವಿಜಯಪುರ: ಬಿ.ಎಸ್. ಯಡಿಯೂರಪ್ಪನವರು ಹೈಕಮಾಂಡ್ ಗೆ ಬೆದರಿಕೆಯೊಡ್ಡಿ ಬಸವರಾಜ ಬೊಮ್ಮಾಯಿಯನ್ನು ಸಿಎಂ ಮಾಡಿದ್ದಾರೆ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗಂಭೀರ ಆರೋಪ ಮಾಡಿದರು. ನನಗೆ ಮುಖ್ಯಮಂತ್ರಿ ಆಗೋ ಅವಕಾಶವಿತ್ತು. ಆದರೆ, ಯಡಿಯೂರಪ್ಪ ನನಗೆ ಅವಕಾಶ ತಪ್ಪಿಸಿದರು. ಯತ್ನಾಳ್ ಅವರನ್ನ ಸಿಎಂ ಮಾಡಿದರೆ ಮೂರು ತಿಂಗಳಲ್ಲಿ ಸರ್ಕಾರ‌ ಬೀಳಿಸುತ್ತೇನೆಂದು ಕೇಂದ್ರದ ನಾಯಕರಿಗೆ ಬೆದರಿಕೆ ಹಾಕಿದ್ದರು ಎಂದು ಹೊಸ ಬಾಂಬ್ ಸಿಡಿಸಿದರು. ನಾನು ಸಚಿವ ಸ್ಥಾನಕ್ಕಾಗಿ ಲಾಬಿ ಮಾಡಲ್ಲ. ಈ ಹಿಂದೆಯೂ ನಾನು ದೆಹಲಿ‌ಯಲ್ಲಿ […]