ಕೊರೊನಾ ಲಕ್ಷಣ ಕಂಡುಬಂದ ಕೂಡಲೇ ಟೆಸ್ಟ್ ಮಾಡಿಸಿಕೊಳ್ಳಿ: ಮನೆಯಿಂದ ನೇರವಾಗಿ ಆಸ್ಪತ್ರೆಗೆ ಬಂದರೆ ಬೆಡ್ ಒದಗಿಸಲು ಆಗಲ್ಲ; ಡಿಸಿ ಎಚ್ಚರಿಕೆ
ಉಡುಪಿ: ಕೊರೊನಾ ಲಕ್ಷಣ ಕಂಡುಬಂದ ಕೂಡಲೇ ಟೆಸ್ಟ್ ಗೆ ಒಳಪಡಬೇಕು. ಸೋಂಕು ಉಲ್ಬಣಗೊಂಡ ಬಳಿಕ ಮನೆಯಿಂದ ನೇರವಾಗಿ ಆಸ್ಪತ್ರೆಗೆ ಬಂದರೆ, ಅಂತಹ ರೋಗಿಗಳಿಗೆ ವೆಂಟಿಲೇಟರ್ ಬೆಡ್ ಒದಗಿಸಲು ಆಗುವುದಿಲ್ಲ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಶೇ.90ರಷ್ಟು ಮಂದಿಗೆ ಆಸ್ಪತ್ರೆಯ ಅಗತ್ಯ ಇರುವುದಿಲ್ಲ. ಕೇವಲ ಶೇ.10 ಮಂದಿಗೆ ಮಾತ್ರ ಅಗತ್ಯ ಇರುತ್ತದೆ. ಅಂತಹ ಶೇ.10 ಮಂದಿಗೆ ಜಿಲ್ಲಾಡಳಿತ ಬೆಡ್ ಕೊಡಲು ಸಿದ್ಧ ಇದೆ. ಅದರಲ್ಲಿ ಶೇ.1 ಮಂದಿಗೆ ಐಸಿಯು ಮತ್ತು ಶೇ.2ರಷ್ಟು […]