ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ‘ಟೆಕ್ನೋಫಿಯಾ’

ಮೂಡಬಿದ್ರೆ: ಗಣಕಯಂತ್ರ ವಿಭಾಗದಲ್ಲಿ ವಿಪುಲವಾದ ಅವಕಾಶಗಳಿದ್ದು ಅವುಗಳನ್ನು ಸದುಪಯೋಗ ಪಡಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಕಾರ್ಯ ಪ್ರವೃತ್ತರಾಗಬೇಕಾಗಿದೆ. ವಿದ್ಯಾರ್ಥಿಗಳು ಕಲಿಕೆಯಲ್ಲಿ ಅತಿಹೆಚ್ಚು ತೊಡಗಿಸಿಕೊಂಡಾಗ ಅದರ ಪ್ರತಿಫಲವನ್ನು ಔದ್ಯೋಗಿಕ ಜೀವನದಲ್ಲಿ ಕಂಡುಕೊಳ್ಳಬಹುದು ಎಂದು ಡ್ಯಾನ್ಸ್ಕೆ ಬ್ಯಾಂಕ್ ನ ಸೀನಿಯರ್ ಸಾಫ್ಟ್‌ವೇರ್ ಅರ್ಕಿಟೆಕ್ಟ್ ಕಾತಿಮಯ್ಯ ಹೇಳಿದರು. ಆಳ್ವಾಸ್ ಇಂಜಿನಿರಿಂಗ್ ಕಾಲೇಜಿನ ಗಣಕಯಂತ್ರ ವಿಭಾಗದ ವತಿಯಿಂದ ನಡೆದ ‘ಟೆಕ್ನೋಫಿಯಾ’ ಫೆಸ್ಟ್ ಉದ್ಘಾಟಿಸಿ ಮಾತನಾಡಿದರು. ಡಿಲೈಟ್ ಕಂಪನಿಯ ಡೈರೆಕ್ಟರ್ ಅರುಣ್ ರಾಜ್ ಪುರೋಹಿತ್ ಮಾತಾನಾಡುತ್ತಾ “ಕೇವಲ ಹಣಗಳಿಸುವದು ಮತ್ತು ಒಳ್ಳೆಯ ಉದ್ಯೋಗವನ್ನು ಪಡಯುವುದು ನಿಜವಾದ […]