ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ‘ಟೆಕ್ನೋಫಿಯಾ’

ಮೂಡಬಿದ್ರೆ: ಗಣಕಯಂತ್ರ ವಿಭಾಗದಲ್ಲಿ ವಿಪುಲವಾದ ಅವಕಾಶಗಳಿದ್ದು ಅವುಗಳನ್ನು ಸದುಪಯೋಗ ಪಡಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಕಾರ್ಯ ಪ್ರವೃತ್ತರಾಗಬೇಕಾಗಿದೆ. ವಿದ್ಯಾರ್ಥಿಗಳು ಕಲಿಕೆಯಲ್ಲಿ ಅತಿಹೆಚ್ಚು ತೊಡಗಿಸಿಕೊಂಡಾಗ ಅದರ ಪ್ರತಿಫಲವನ್ನು ಔದ್ಯೋಗಿಕ ಜೀವನದಲ್ಲಿ ಕಂಡುಕೊಳ್ಳಬಹುದು ಎಂದು ಡ್ಯಾನ್ಸ್ಕೆ ಬ್ಯಾಂಕ್ ನ ಸೀನಿಯರ್ ಸಾಫ್ಟ್‌ವೇರ್ ಅರ್ಕಿಟೆಕ್ಟ್ ಕಾತಿಮಯ್ಯ ಹೇಳಿದರು.

ಆಳ್ವಾಸ್ ಇಂಜಿನಿರಿಂಗ್ ಕಾಲೇಜಿನ ಗಣಕಯಂತ್ರ ವಿಭಾಗದ ವತಿಯಿಂದ ನಡೆದ ‘ಟೆಕ್ನೋಫಿಯಾ’ ಫೆಸ್ಟ್ ಉದ್ಘಾಟಿಸಿ ಮಾತನಾಡಿದರು.

ಡಿಲೈಟ್ ಕಂಪನಿಯ ಡೈರೆಕ್ಟರ್ ಅರುಣ್ ರಾಜ್ ಪುರೋಹಿತ್ ಮಾತಾನಾಡುತ್ತಾ “ಕೇವಲ ಹಣಗಳಿಸುವದು ಮತ್ತು ಒಳ್ಳೆಯ ಉದ್ಯೋಗವನ್ನು ಪಡಯುವುದು ನಿಜವಾದ ಜೀವನವಲ್ಲ. ಅದರ ಜತೆಗೆ ದೇಶದ ಆರ್ಥಿಕ ವ್ಯವಸ್ಥೆಗೆ ತಮ್ಮಿಂದ ಏನು ಮಾಡಲು ಸಾದ್ಯ ಎಂಬುದನ್ನು ಯೋಚಿಸಬೇಕು. ನಾವೆಲ್ಲರು ಎಲ್ಲರ ಕಷ್ಟ ದು:ಖಗಳಲ್ಲಿ ಭಾಗಿಯಾಗಿ ಮಾನವೀಯತೆಯಿಂದ ಬದುಕೋಣ ಎಂದರು.

ಕಾರ್‍ಯಕ್ರಮದ ಅದ್ಯಕ್ಷತೆಯನ್ನು ವಹಿಸಿದ್ದ ಆಳ್ವಾಸ್ ಇಂಜಿನಿರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ಪೀಟರ್ ಫೆರ್ನಾಂಡಿಸ್ ಮಾತನಾಡಿ, ಗಣಕಯಂತ್ರ ವಿಭಾಗ ಅತ್ಯಂತ ಕ್ಲಿಷ್ಟ ಮತ್ತು ಸವಾಲಿನ ವಿಭಾಗವಾದ್ದರಿಂದ ವಿದ್ಯಾರ್ಥಿಗಳು ದಿನೇ ದಿನೇ ಬದಲಾಗುತ್ತಿರುವ ತಂತ್ರಜ್ಞಾನಗಳ ಕುರಿತಾಗಿ ಜ್ಞಾನವನ್ನು ಹೊಂದಿರಬೇಕು. ನವೀಕೃತ ತಂತ್ರಜ್ಞಾನಗಳಿಗೆ ಒಗ್ಗಿಕೊಂಡಾಗ ಮಾತ್ರ ಜೀವನದಲ್ಲಿ ಯಶಸ್ಸನ್ನು ಕಂಡುಕೊಳ್ಳಲು ಸಾಧ್ಯ ಎಂದರು.
‘ಟೆಕ್ನೋಫಿಯಾ’ ಫೆಸ್ಟ್‌ನಲ್ಲಿ ಮಂಗಳೂರಿನ ಎಜೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿತು.

ಕಾರ್‍ಯಕ್ರಮದಲ್ಲಿ ಗಣಕಯಂತ್ರ ವಿಭಾಗದ ಮುಖ್ಯಸ್ಥ ಡಾ. ಮಂಜುನಾಥ್ ಕೊಠಾರಿ, ಕಾರ್‍ಯಕ್ರಮ ಸಂಯೋಜಕ ಹರೀಶ್ ಕುಂದರ್, ಹೋಮ್ಜಾದ ಸಂಸ್ಥಾಪಕ ಸೃಜನ್ ದಾಸ್ ಹಾಗೂ ವಿದ್ಯಾರ್ಥಿ ಸಂಯೋಜಕರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಸುಪ್ರಿಕ್ಷಾ ಶೆಟ್ಟಿ ಸ್ವಾಗತಿಸಿ, ವಿಹಾ. ಬಿ. ರಾಜು ವಂದಿಸಿ, ಅಕ್ಷತಾ ಶೆಟ್ಟಿ ಕಾರ್‍ಯಕ್ರಮವನ್ನು ನಿರೂಪಿಸಿದರು.