ನೊಂದು ವಿಷ ಸೇವಿಸಿದ್ದ ಮೀನುಗಾರನ ಸಹೋದರ ಮೃತ್ಯು
ಉಡುಪಿ: ಸುವರ್ಣ ತ್ರಿಭುಜ ಬೋಟ್ ಅವಘಡದಲ್ಲಿ ನಾಪತ್ತೆಯಾಗಿರುವ ಭಟ್ಕಳ ಬಂದರ್ ರೋಡ್‌ನ ಶನಿಯಾರ ತಿಮ್ಮಪ್ಪ ಮೊಗೇರ ಎಂಬವರ ಪುತ್ರ ರಮೇಶ್ ಮೊಗೇರರ ಚಿಂತೆಯಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಜೀವನ್ಮರಣದ ಮಧ್ಯೆ ಹೋರಾಟ ನಡೆಸುತ್ತಿರುವ ಸಹೋದರ ಚಂದ್ರಶೇಖರ್ ಮೊಗೇರ (30) ಚಿಕಿತ್ಸೆ ಫಲಕಾರಿಯಾಗದೆ ಇದೀಗ ಮೃತಪಟ್ಟಿದ್ದಾರೆ. ಮಾರಕವಾದ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಚಂದ್ರಶೇಖರ್ 3 ದಿನಗಳ ಬಳಿಕ ವಿಷ ಸೇವನೆ ಬಗ್ಗೆ ನೆರೆಮನೆಯವರಲ್ಲಿ ಬಾಯಿಬಿಟ್ಟಿದ್ದರು. ವಿಷ ರಕ್ತದಲ್ಲಿ ಸೇರಿ ಲಿವರ್‌ಗೆ ಹಾನಿಯಾಗಿದೆ. ದೇಹದೊಳಗೆ ಅತಿಯಾದ […]
ಸುವರ್ಣ ತ್ರಿಭುಜ ಬೋಟ್ನಲ್ಲಿ ನಾಪತ್ತೆಯಾದ ರಮೇಶ್ ಸಹೋದರ ಆತ್ಮಹತ್ಯೆ ಗೆ ಯತ್ನ
ಉಡುಪಿ: ಉಡುಪಿಯ ಸುವರ್ಣ ತ್ರಿಭುಜ ಬೋಟು ಅವಘಡದಲ್ಲಿ ನಾಪತ್ತೆಯಾಗಿದ್ದ ಭಟ್ಕಳದ ರಮೇಶ್ ಅವರ ಸಹೋದರ ಚಂದ್ರಶೇಖರ್ (30) ಅವರು ಅಣ್ಣನ ಚಿಂತೆಯಿಂದ ನೊಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಸಂಭವಿಸಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಚಂದ್ರಶೇಖರ್ ಚಿಂತಾಜನಕ ಸ್ಥಿತಿಯಲ್ಲಿದ್ದು, ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಂದು ಮಗನನ್ನು ಕಳೆದುಕೊಂಡು ದುಃಖದಲ್ಲಿರುವ ಕುಟುಂಬಕ್ಕೆ ಈ ಘಟನೆ ಆಘಾತ ಉಂಟು ಮಾಡಿದೆ. ಡಿ.13ರಂದು ಸುವರ್ಣ ತ್ರಿಭುಜ ಬೋಟಿನಲ್ಲಿ ಇತರರೊಂದಿಗೆ ಮೀನು ಗಾರಿಕೆಗೆ ತೆರಳಿದ್ದ ರಮೇಶ್ ನಾಪತ್ತೆಯಾಗಿದ್ದರು. ಈ […]
ನಾಪತ್ತೆಯಾದ ಮೀನುಗಾರರನ್ನು ಹುಡುಕಿಕೊಡುವಲ್ಲಿ ಸರ್ಕಾರದ ನಿರ್ಲಕ್ಷ್ಯ: ಮೀನುಗಾರರ ಕುಟುಂಬದಿಂದ ಮತದಾನ ಬಹಿಷ್ಕಾರ
ಉಡುಪಿ: ನಾಪತ್ತೆಯಾಗಿರುವ ಏಳು ಮಂದಿ ಮೀನುಗಾರರನ್ನು ಹುಡುಕಿಕೊಡುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿ ನಾಪತ್ತೆಯಾದ ಮೀನುಗಾರರ ಮನೆಯ ಕುಟುಂಬದವರು ಲೋಕಸಭೆ ಚುನಾವಣೆಯನ್ನು ಬಹಿಷ್ಕರಿಸಲು ತೀರ್ಮಾನಿಸಿದ್ದಾರೆ. ಮಲ್ಪೆ ಬಂದರಿನಿಂದ ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ಸುವರ್ಣ ತ್ರಿಭುಜ ಬೋಟ್ ಸಹಿತ ಏಳು ಮಂದಿ ಮೀನುಗಾರರು ಕಣ್ಮರೆಯಾಗಿ 87 ದಿನಗಳು ಕಳೆದಿವೆ. ಕಣ್ಮರೆಯಾಗಿರುವ ಏಳು ಮಂದಿ ಮೀನುಗಾರರ ಕುಟುಂಬದವರಲ್ಲಿ ಮೌನದ ಛಾಯೆ ಆವರಿಸಿದೆ. ಮೀನುಗಾರರು ಬರುತ್ತಾರೆ ಎಂಬ ನಂಬಿಕೆಯ ಮೇಲೆ ದಿನದೂಡುತ್ತಿದ್ದಾರೆ. ಆದರೆ ಮೀನುಗಾರರ ನಾಪತ್ತೆ ಪ್ರಕರಣದ ಬಗ್ಗೆ ಮೌನವಾಗಿರುವ […]