ನೊಂದು ವಿಷ ಸೇವಿಸಿದ್ದ ಮೀನುಗಾರನ ಸಹೋದರ ಮೃತ್ಯು

ಉಡುಪಿ: ಸುವರ್ಣ ತ್ರಿಭುಜ ಬೋಟ್ ಅವಘಡದಲ್ಲಿ ನಾಪತ್ತೆಯಾಗಿರುವ ಭಟ್ಕಳ ಬಂದರ್ ರೋಡ್‌ನ ಶನಿಯಾರ ತಿಮ್ಮಪ್ಪ ಮೊಗೇರ ಎಂಬವರ ಪುತ್ರ ರಮೇಶ್ ಮೊಗೇರರ ಚಿಂತೆಯಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಜೀವನ್ಮರಣದ ಮಧ್ಯೆ ಹೋರಾಟ ನಡೆಸುತ್ತಿರುವ ಸಹೋದರ ಚಂದ್ರಶೇಖರ್ ಮೊಗೇರ (30) ಚಿಕಿತ್ಸೆ ಫಲಕಾರಿಯಾಗದೆ ಇದೀಗ ಮೃತಪಟ್ಟಿದ್ದಾರೆ.

ಮಾರಕವಾದ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಚಂದ್ರಶೇಖರ್ 3 ದಿನಗಳ ಬಳಿಕ ವಿಷ ಸೇವನೆ ಬಗ್ಗೆ ನೆರೆಮನೆಯವರಲ್ಲಿ ಬಾಯಿಬಿಟ್ಟಿದ್ದರು. ವಿಷ ರಕ್ತದಲ್ಲಿ ಸೇರಿ ಲಿವರ್‌ಗೆ ಹಾನಿಯಾಗಿದೆ. ದೇಹದೊಳಗೆ ಅತಿಯಾದ ರಕ್ತಸ್ರಾವವೂ ಉಂಟಾಗಿದ್ದು, ಕಿಡ್ನಿಯೂ ವೈಫಲ್ಯ ಗೊಂಡ ಬಳಿಕ ಆಸ್ಪತ್ರೆಗೆ ದಾಖಲಾದ ಪರಿಣಾಮ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು ಎಂದು ವೈದ್ಯರು ತಿಳಿಸಿದ್ದರು.