ಫೆ.8: ಉಡುಪಿ ಕಿದಿಯೂರು ಶ್ರೀ ವಿದ್ಯಾಸಮುದ್ರತೀರ್ಥ ಪ್ರೌಢಶಾಲೆ ಸುವರ್ಣ ಸಂಭ್ರಮ
ಉಡುಪಿ: ಕಿದಿಯೂರು ವಿದ್ಯಾಸಮುದ್ರತೀರ್ಥ ಪ್ರೌಢಶಾಲೆಯ ಸುವರ್ಣ ಸಂಭ್ರಮ ಇದೇ 8ರಿಂದ 10ರ ವರೆಗೆ ಶಾಲೆಯ ಆವರಣದಲ್ಲಿ ನಡೆಯಲಿದೆ ಎಂದು ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ಕೆ. ಉದಯಕುಮಾರ್ ಶೆಟ್ಟಿ ಹೇಳಿದರು. ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಲೆಯ ಸುವರ್ಣ ಮಹೋತ್ಸವ ಸಮಿತಿಯ ವತಿಯಿಂದ ಈ ಸಮಾರಂಭ ಜರುಗಲಿದೆ. ಫೆ. 8ರಂದು ಬೆಳಿಗ್ಗೆ 9ಗಂಟೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಸುವರ್ಣ ಸಂಭ್ರಮದ ಧ್ವಜಾರೋಹಣ ನೆರವೇರಿಸುವರು. ಬೆಳಿಗ್ಗೆ 9.30ಕ್ಕೆ ಉದ್ಯಮಿ ಜಿ. ಶಂಕರ್ ನೂತನ ಸಭಾಂಗಣವನ್ನು ಉದ್ಘಾಟಿಸುವರು. […]