ಪರಿಸರ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ: ಶಾಸಕ ಸುನಿಲ್ ಕುಮಾರ್
ಕಾರ್ಕಳ : ಪರಿಸರ ವ್ಯವಸ್ಥೆಯಲ್ಲಿ ಅಳಿವಿನ ಅಂಚಿಗೆ ಬಂದಿರುವ ವನ್ಯ ಸಸ್ಯ-ಪ್ರಾಣಿಗಳ ಸಂರಕ್ಷಣೆ ಅಗತ್ಯವಿದೆ ಎಂದು ಕಾರ್ಕಳ ಶಾಸಕ ವಿ.ಸುನೀಲ್ ಕುಮಾರ್ ಹೇಳಿದರು. ಮಂಗಳೂರು ವೃತ್ತ, ಕುಂದಾಪುರ ವಿಭಾಗ ಹಾಗೂ ಕಾರ್ಕಳ ವಲಯದ ವತಿಯಿಂದ ಶಿರ್ಲಾಲು ಸಸ್ಯಕ್ಷೇತ್ರದಲ್ಲಿ ನಡೆದ ಅಂತರರಾಷ್ಟ್ರೀಯ ಜೀವವೈವಿಧ್ಯ ದಿನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮನುಕುಲದ ರೀತಿ ಇತರ ಪ್ರಾಣಿಗಳಿಗು ಬದುಕುವ ಹಕ್ಕಿದೆ. ಜೈವಿಕ ಸಂಪನ್ಮೂಲಗಳ ಸುಸ್ಥಿರ ಬಳಕೆ ಜೀವವೈವಿಧ್ಯಗಳ ರಕ್ಷಣೆ ಅತ್ಯಂತ ಮಹತ್ವವಾದದು. ಪ್ರಮುಖವಾಗಿ ಜೀವವೈವಿಧ್ಯತೆಗಳ ಕುರಿತು ಅರಿವು ಮೂಡಿಸುವ ಕಾರ್ಯ ನಡೆಯಬೇಕಾಗಿದೆ […]