ಪರಿಸರ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ: ಶಾಸಕ ಸುನಿಲ್ ಕುಮಾರ್

ಕಾರ್ಕಳ : ಪರಿಸರ ವ್ಯವಸ್ಥೆಯಲ್ಲಿ ಅಳಿವಿನ ಅಂಚಿಗೆ ಬಂದಿರುವ ವನ್ಯ ಸಸ್ಯ-ಪ್ರಾಣಿಗಳ ಸಂರಕ್ಷಣೆ ಅಗತ್ಯವಿದೆ ಎಂದು ಕಾರ್ಕಳ ಶಾಸಕ‌ ವಿ.ಸುನೀಲ್ ಕುಮಾರ್ ಹೇಳಿದರು.

ಮಂಗಳೂರು ವೃತ್ತ, ಕುಂದಾಪುರ ವಿಭಾಗ ಹಾಗೂ ಕಾರ್ಕಳ ವಲಯದ ವತಿಯಿಂದ ಶಿರ್ಲಾಲು ಸಸ್ಯಕ್ಷೇತ್ರದಲ್ಲಿ ನಡೆದ ಅಂತರರಾಷ್ಟ್ರೀಯ ಜೀವವೈವಿಧ್ಯ ದಿನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮನುಕುಲದ ರೀತಿ ಇತರ ಪ್ರಾಣಿಗಳಿಗು ಬದುಕುವ ಹಕ್ಕಿದೆ. ಜೈವಿಕ ಸಂಪನ್ಮೂಲಗಳ ಸುಸ್ಥಿರ ಬಳಕೆ ಜೀವವೈವಿಧ್ಯಗಳ ರಕ್ಷಣೆ ಅತ್ಯಂತ ಮಹತ್ವವಾದದು. ಪ್ರಮುಖವಾಗಿ ಜೀವವೈವಿಧ್ಯತೆಗಳ ಕುರಿತು ಅರಿವು ಮೂಡಿಸುವ ಕಾರ್ಯ ನಡೆಯಬೇಕಾಗಿದೆ ಎಂದು ಹೇಳಿದರು.

ಪ್ರಶಕ್ತ ವಾಗಿ ಕಾರ್ಕಳ ತಾಲೂಕಿನ ಕ್ವಾರೆಂಟೈನ್ ಕೇಂದ್ರಗಳ ಸುತ್ತ ಮುತ್ತ ಅಶ್ವತ್ಥ ಹಾಗು ಕ್ವಾರೆಂಟೈನ್ನಲ್ಲಿರುವ ಜನರಿಗೆ ಪರಿಸರ ಪರ್ವದ ದ್ಯೋತಕವಾಗಿ ಹಾಗೂ ಗಿಡಗಳ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸ್ವಚ್ಛ ಕಾರ್ಕಳ ಹಸಿರುಕಾರ್ಕಳ ವಾಗಿ ಬರಲು ಅರಣ್ಯ ಇಲಾಖೆಯ ಸಹಕಾರ ಶ್ಲಾಘನೀಯ ಎಂದರು.

ಕಾರ್ಯ ಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಉಪ ಅರಣ್ಯ ಸಂರಕ್ಷಣ ಅಧಿಕಾರಿ ಆಶೀಶ್ ರೆಡ್ಡಿ ಮಾತನಾಡಿ
ಕಾಡುಗಳಲ್ಲಿ ಅನೇಕ ಜೀವಿ ಪ್ರಭೇದಗಳು ಸಂರಕ್ಷಿತವಾಗಿವೆ. ನೈಸರ್ಗಿಕ ಪರಿಸರ, ನದಿ, ಅರಣ್ಯ, ಸರೋವರ ಹಾಗು ವನ್ಯಜೀವಿಗಳ ಸಂರಕ್ಷಣೆ ಮತ್ತು ಅಭಿವೃದ್ದಿ ಪಡಿಸುವುದು ಪ್ರತಿಯೊಬ್ಬ ಆದ್ಯ ಕರ್ತವ್ಯ . ಎಂದು ತಿಳಿಸಿದರು.

ಕಾರ್ಕಳ ವಲಯ ಅರಣ್ಯಾಧಿಕಾರಿ ದಿನೇಶ್ ಪ್ರಾಸ್ತಾವಿಕ ಮಾತನಾಡಿಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜೀವವೈವಿಧ್ಯ ನಿರ್ವಹಣೆ ಸಮಿತಿಗಳನ್ನು ರಚಿಸಿ, ಕ್ರೀಯಾಶೀಲವನ್ನಾಗಿ ಮಾಡಬೇಕಾಗಿದೆ ಎಂದರು.

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಲೋಹಿತ್ , ಜಿ.ಪಂ ಸದಸ್ಯರಾದ ಸುಮಿತ್ ಕೌಡುರು, ಉದಯ ಎಸ್ ಕೊಟ್ಯಾನ್, ಜ್ಯೋತಿ ಹರೀಶ್, ಶಿರ್ಲಾಲು ಗ್ರಾ.ಪಂ.ಅಧ್ಯಕ್ಷ ರಾಜುಶೆಟ್ಟಿ, ತಾ.ಪಂ ಉಪಾಧ್ಯಕ್ಷ ಹರೀಶ್ ನಾಯಕ್, ಉಪಸ್ಥಿತರಿದ್ದರು.
ಚಂದ್ರಕಾಂತ ಪೌಳ್ ಸ್ವಾಗತಿಸಿ, ಅರಣ್ಯಾಧಿಕಾರಿ ಪ್ರಕಾಶ್ಚಂದ್ರ ಕಾರ್ಯಕ್ರಮ ನಿರೂಪಿಸಿದರು.
ಉಪವಲಯ ಅರಣ್ಯಾಧಿಕಾರಿ ಮುಡೂರ ಕೊಠಾರಿ ಧನ್ಯವಾದವಿತ್ತರು.