ರಂಗಭೂಮಿ‌ ನೈಜತೆಯ ಪ್ರತಿಬಿಂಬ: ಮಂಜಮ್ಮ ಜೋಗತಿ

ಉಡುಪಿ: ರಂಗಭೂಮಿ ನೈಜತೆಯ ಪ್ರತಿಬಿಂಬ. ಮನಸ್ಸನ್ನು ವೃದ್ಧಿಸುವ, ಮಾತನ್ನಾಡುವ ಶಕ್ತಿ ಕಲೆಯಿಂದ ಪ್ರಾಪ್ತಿಯಾಗುತ್ತದೆ. ಹಾಗಾಗಿ ಕಲೆಯಿಲ್ಲದೆ ಜೀವನವೂ ಇಲ್ಲ ಎಂದು ಕರ್ನಾಟಕ ಜನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ಹೇಳಿದರು. ಸುಮನಸಾ ಕೊಡವೂರು ಸಂಸ್ಥೆಯು ಕನ್ನಡ ಸಂಸ್ಕೃತಿ ಇಲಾಖೆ, ಸಂಸ್ಕೃತಿ ನಿರ್ದೇಶನಾಲಯ, ನಗರಸಭೆ ಹಾಗೂ ಪೇಜಾವರ ಮಠದ ಸಹಕಾರದೊಂದಿಗೆ ಆಯೋಜಿಸಿದ್ದ ರಂಗಹಬ್ಬ–8 ನಾಟಕೋತ್ಸವದ ಮೂರನೆ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು. ರಂಗಭೂಮಿ ಎಲ್ಲರನ್ನು ಕೈ ಬೀಸಿ ಕರೆಯುತ್ತದೆ. ಅದರಲ್ಲಿ ಕೆಲವರನ್ನು ಆಯ್ಕೆ ಮಾಡಿಕೊಳ್ಳುತ್ತದೆ. ಭಕ್ತಿ, ಶ್ರದ್ಧೆ, ಪ್ರೀತಿಯಿಂದ ಮಾಡುವ […]