ಹೂಳೆತ್ತಲು ಬಾವಿಗಿಳಿದ ಇಬ್ಬರು ಕಾರ್ಮಿಕರ ಜೀವ ಉಳಿಸಿದ ಹಿಂ.ಜಾ.ವೇ ಕಾರ್ಯಕರ್ತ ಸುಜಿತ್ ನಾಯಕ್
ಕಾರ್ಕಳ: ಇಲ್ಲಿನ ಬೈಲೂರು ಎಂಬಲ್ಲಿ ಬಾವಿಯ ಹೂಳು ತೆಗೆಯಲು ಹೋಗಿ ಉಸಿರುಗಟ್ಟಿ ಬಾವಿಯೊಳಗೆ ಅಸ್ವಸ್ಥಗೊಂಡಿದ್ದ ಮೂವರು ಕೂಲಿ ಕಾರ್ಮಿಕರನ್ನು ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತ ಸುಜಿತ್ ನಾಯಕ್ ನೀರೆ ಅವರು ಮೇಲೆತ್ತುವ ಮೂಲಕ ಇಬ್ಬರ ಜೀವ ಉಳಿಸಿ ಸಾಹಸ ಮೆರೆದಿದ್ದಾರೆ. ದುರಾದೃಷ್ಟವಶಾತ್ ಓರ್ವ ಕೂಲಿಕಾರ್ಮಿಕನ ಪ್ರಾಣಪಕ್ಷಿ ಅಷ್ಟೊತ್ತಿಗೆ ಹಾರಿಹೋಗಿತ್ತು. ಮೂಡುಬಿದಿರೆ ಕೋಟೆಬಾಗಿಲು ನಿವಾಸಿ ಮಣಿ (24) ಎಂಬವರು ಅದಾಗಲೇ ಉಸಿರುಗಟ್ಟಿ ಸಾವನ್ನಪ್ಪಿದ್ದರು. ಅಸ್ವಸ್ಥಗೊಂಡ ಇಬ್ಬರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. […]