ಮೇ 10 ರಂದು ಮೈಮನ ಪೋಣಿಸಲಿದೆ ಹಿರಿಯಡ್ಕದ ಹುಡುಗ ಯಶವಂತ್‌ ಶೆಟ್ಟಿ ಅಭಿನಯದ “ಸೂಜಿದಾರ”

ಮೂವಿ ಮಸಾಲ:  ಜನಪ್ರಿಯ ರಂಗಕರ್ಮಿ ಮೌನೇಶ್ ಬಡಿಗೇರ್ ಅವರ ನಿರ್ದೇಶನ, ಬಹುಭಾಷಾ ನಟಿ ಹರಿಪ್ರಿಯಾ ಹಾಗೂ  ಉಡುಪಿ ಜಿಲ್ಯಲೆಯ ಹಿರಿಯಡ್ಕದ ಯಶವಂತ್‌ ಶೆಟ್ಟಿ  ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ಸೂಜಿದಾರ’  ಇದೇ ಮೇ 10ರಂದು  ಸಿನಿ ಪ್ರಿಯರ ಮೈಮನ ಪೋಣಿಸಲಿದೆ. ಸೂಜಿ ಮತ್ತು ದಾರ ಹೊಸತೊಂದು ಕಸೂತಿಯೇ ಸೃಷ್ಟಿಯಾಗುವಂತೆ  ಈ ಸಿನಿಮಾದ ಕತೆ ಕೂಡ ನಮ್ಮೊಳಗಿನ ಭಾವನೆಗಳನ್ನು ಅಚ್ಚುಕಟ್ಟಾಗಿ ಪೋಣಿಸಲಿದೆಯಾ ಅನ್ನುವ ಪ್ರಶ್ನೆ ಪ್ರೇಕ್ಷಕನಲ್ಲಿ ಹುಟ್ಟಿಕೊಂಡಿದೆ. ಸೂಕ್ಷ್ಮಸಂವೇದನೆಯ ಭಾವನೆಗಳೇ ಫೋಕಸ್ ಆದಂತಿರುವ ಚಿತ್ರದ ಟ್ರೈಲರ್ ಕೂಡ ಈಗಾಗಲೇ ಸದ್ದು ಮಾಡಿದ್ದು […]