ಹೆಚ್ಚುತ್ತಿರುವ ಕೋವಿಡ್ ಪ್ರಕರಣ: ಓಮಿಕ್ರಾನ್ ಉಪತಳಿ ಪ್ರಾಬಲ್ಯವನ್ನು ತೋರಿಸುತ್ತಿರುವ ಜಿನೋಮ್ ಸೀಕ್ವೆನ್ಸಿಂಗ್ ಪರೀಕ್ಷೆ

ಬೆಂಗಳೂರು: ಕರ್ನಾಟಕದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ರಾಜ್ಯದಲ್ಲಿ ನಡೆಸಿದ ಜೀನೋಮ್ ಸೀಕ್ವೆನ್ಸಿಂಗ್ ಪರೀಕ್ಷೆಗಳು ಓಮಿಕ್ರಾನ್ ರೂಪಾಂತರವು ರಾಜ್ಯದಲ್ಲಿ ಇನ್ನೂ ಪ್ರಾಬಲ್ಯ ಹೊಂದಿದೆ ಎನ್ನುವುದನ್ನು ತೋರಿಸುತ್ತಿದೆ ಎಂದು ಆರೋಗ್ಯ ಸಚಿವ ಸುಧಾಕರ್ ಹೇಳಿದ್ದಾರೆ. ಈ ನಿಟ್ಟಿನಲ್ಲಿ, ಕರ್ನಾಟಕ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಬುಧವಾರ ಟ್ವೀಟ್ ಮಾಡಿ, ಕೋವಿಡ್-19 ರೋಗಲಕ್ಷಣಗಳನ್ನು ಹೊಂದಿರುವ ಹೆಚ್ಚಿನ ಜನರು ನೋವಲ್ ಕೊರೊನಾ ವೈರಸ್‌ನ ಓಮಿಕ್ರಾನ್ ರೂಪಾಂತರದ ಬಿಎ.2 ಉಪ-ವೇರಿಯಂಟ್‌ನಿಂದ ಸೋಂಕಿಗೆ ಒಳಗಾಗಿದ್ದಾರೆ ಎಂದು ಹೇಳಿದ್ದಾರೆ. “ಕರ್ನಾಟಕದಲ್ಲಿ ಯಾವ ತಳಿ ಪ್ರಾಬಲ್ಯ ಹೊಂದಿದೆ? ಜಿನೋಮ್ […]

ಆಸ್ಪತ್ರೆ ದಾಖಲಾಗುವ ಮೊದಲಿನ ರೋಗಲಕ್ಷಣರಹಿತ ರೋಗಿಗಳ ಮುನ್ನೆಚ್ಚರಿಕಾ ಕೋವಿಡ್ ಪರೀಕ್ಷೆ ಸ್ಥಗಿತ: ಸಚಿವ ಸುಧಾಕರ್

ಬೆಂಗಳೂರು: ಕರ್ನಾಟಕದಲ್ಲಿ ಕೋವಿಡ್-19 ಪ್ರಕರಣಗಳು ಇಳಿಮುಖವಾಗುತ್ತಿದ್ದು, ರೋಗಲಕ್ಷಣವಿಲ್ಲದ ರೋಗಿಗಳನ್ನು ಆಸ್ಪತ್ರೆಗೆ ದಾಖಲು ಮಾಡುವ ಮುನ್ನ, ಶಸ್ತ್ರ ಚಿಕಿತ್ಸೆ, ಸ್ಕ್ಯಾನಿಂಗ್ ಮತ್ತು ಇತರ ವೈದ್ಯಕೀಯ ವಿಧಾನಗಳನ್ನು ಮಾಡುವ ಮೊದಲು ಮಾಡಬೇಕಾಗಿದ್ದ ಕೋವಿಡ್-19 ಮುನ್ನೆಚ್ಚರಿಕಾ ಪರೀಕ್ಷೆಯನ್ನು ಸ್ಥಗಿತಗೊಳಿಸುವಂತೆ ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಸೂಚನೆ ನೀಡಲಾಗಿದೆ ಎಂದು ರಾಜ್ಯ ಆರೋಗ್ಯ ಸಚಿವ ಸುಧಾಕರ್ ಕೆ ಬುಧವಾರ (ಫೆ.23) ಮಾಹಿತಿ ನೀಡಿದ್ದಾರೆ. ಇದು ಹಿಂದಿನ ಕೋವಿಡ್-19 ಪಾಸಿಟಿವ್ ಆಗಿದ್ದ ರೋಗಿಗಳು, ಗುಣಮುಖರಾದವರು ಮತ್ತು ಹೆಚ್ಚಿನ ಚಿಕಿತ್ಸೆಗಾಗಿ ನಾನ್- ಕೋವಿಡ್ […]