ಹೆಚ್ಚುತ್ತಿರುವ ಕೋವಿಡ್ ಪ್ರಕರಣ: ಓಮಿಕ್ರಾನ್ ಉಪತಳಿ ಪ್ರಾಬಲ್ಯವನ್ನು ತೋರಿಸುತ್ತಿರುವ ಜಿನೋಮ್ ಸೀಕ್ವೆನ್ಸಿಂಗ್ ಪರೀಕ್ಷೆ

ಬೆಂಗಳೂರು: ಕರ್ನಾಟಕದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ರಾಜ್ಯದಲ್ಲಿ ನಡೆಸಿದ ಜೀನೋಮ್ ಸೀಕ್ವೆನ್ಸಿಂಗ್ ಪರೀಕ್ಷೆಗಳು ಓಮಿಕ್ರಾನ್ ರೂಪಾಂತರವು ರಾಜ್ಯದಲ್ಲಿ ಇನ್ನೂ ಪ್ರಾಬಲ್ಯ ಹೊಂದಿದೆ ಎನ್ನುವುದನ್ನು ತೋರಿಸುತ್ತಿದೆ ಎಂದು ಆರೋಗ್ಯ ಸಚಿವ ಸುಧಾಕರ್ ಹೇಳಿದ್ದಾರೆ.

ಈ ನಿಟ್ಟಿನಲ್ಲಿ, ಕರ್ನಾಟಕ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಬುಧವಾರ ಟ್ವೀಟ್ ಮಾಡಿ, ಕೋವಿಡ್-19 ರೋಗಲಕ್ಷಣಗಳನ್ನು ಹೊಂದಿರುವ ಹೆಚ್ಚಿನ ಜನರು ನೋವಲ್ ಕೊರೊನಾ ವೈರಸ್‌ನ ಓಮಿಕ್ರಾನ್ ರೂಪಾಂತರದ ಬಿಎ.2 ಉಪ-ವೇರಿಯಂಟ್‌ನಿಂದ ಸೋಂಕಿಗೆ ಒಳಗಾಗಿದ್ದಾರೆ ಎಂದು ಹೇಳಿದ್ದಾರೆ.

“ಕರ್ನಾಟಕದಲ್ಲಿ ಯಾವ ತಳಿ ಪ್ರಾಬಲ್ಯ ಹೊಂದಿದೆ? ಜಿನೋಮ್ ಸೀಕ್ವೆನ್ಸಿಂಗ್ ಮಾದರಿಯ ಪ್ರಕಾರ: ಮಾರ್ಚ್ 2021 ರಿಂದ ಡಿಸೆಂಬರ್ 2021 ರವರೆಗೆ- 90.7% ಡೆಲ್ಟಾ, ಜನವರಿ 2022 ರಿಂದ ಏಪ್ರಿಲ್ 2022ರ ವರೆಗೆ- 87.80% ಓಮಿಕ್ರಾನ್, ಮೇ 2022 ರಿಂದ ಜೂನ್ 2022 ರವರೆಗೆ- 99.20% ಓಮಿಕ್ರಾನ್,” ಸುಧಾಕರ್ ಟ್ವೀಟ್ ಮಾಡಿದ್ದಾರೆ.

ಸಚಿವರ ಪ್ರಕಾರ, ಓಮಿಕ್ರಾನ್ ರೂಪಾಂತರಗಳಲ್ಲಿ, ಪ್ರಸ್ತುತ, ಬಿಎ.1.1.529 ಮತ್ತು ಬಿಎ.1 ಕ್ರಮವಾಗಿ 8.60 ಶೇಕಡಾ ಮತ್ತು 0.04 ಶೇಕಡಾಕ್ಕೆ ಕುಸಿದಿದೆ. ಆದರೆ, ಮೇ ತಿಂಗಳಿನಿಂದ ಬಿಎ.2 ಉಪ ವಂಶಾವಳಿ ಶೇ.80.60ರಿಂದ ಶೇ.89.40ಕ್ಕೆ ಏರಿಕೆಯಾಗಿದೆ. ಹೊಸ ರೂಪಾಂತರಗಳಾದ ಬಿಎ.3, ಬಿಎ.4 ಮತ್ತು ಬಿಎ.5 ಅವುಗಳ ಆರಂಭಿಕ ಹಂತಗಳಲ್ಲಿ ಇರುವುದನ್ನು ಗಮನಿಸಲಾಗಿದೆ ಎಂದು ಸುಧಾಕರ್ ಹೇಳಿದ್ದಾರೆ.

Image

Courtesy: Dr.Sudhakar K/ Twitter