50 ಕೊರೊನಾ ಸೋಂಕಿತ ಗರ್ಭಿಣಿಯರಿಗೆ ಯಶಸ್ವಿ ಹೆರಿಗೆ: ಉಡುಪಿಯ ಡಾ. ಟಿಎಂಎ ಪೈ ಆಸ್ಪತ್ರೆಗೆ ಮತ್ತೊಂದು ಗರಿ

ಉಡುಪಿ: ಕೋವಿಡ್ -19 ಸೋಂಕು ಕಾಣಿಸಿಕೊಂಡಿದ್ದ 50 ಗರ್ಭಿಣಿಯರಿಗೆ ಉಡುಪಿಯ ಡಾ. ಟಿಎಂಎ ಪೈ ಆಸ್ಪತ್ರೆ ಯಶಸ್ವಿ ಹೆರಿಗೆ ಮಾಡಿಸುವ ಮೂಲಕ ಮತ್ತೊಂದು ಮೈಲಿಗಲ್ಲು ಸಾಧಿಸಿದೆ. 2020ರ ಮೇ 27ರಿಂದ ಅಕ್ಟೋಬರ್ 3ರ ವರೆಗೆ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗವು 50 ಹೆರಿಗೆಗಳನ್ನು ಯಶಸ್ವಿಯಾಗಿ ನಡೆಸಿದೆ. ನವಜಾತ ಶಿಶುಗಳಿಗೆ ಕೋವಿಡ್ -19 ಸೋಂಕು ತಗುಲುವ ಅಪಾಯ ಇದ್ದುದರಿಂದ ಶಿಶುವನ್ನು ಸೋಂಕಿನಿಂದ ಮುಕ್ತಗೊಳಿಸಲು ಆಸ್ಪತ್ರೆ ಕಠಿಣ ಕ್ರಮಗಳನ್ನು ಕೈಗೊಂಡಿತ್ತು ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಈ ಬಗ್ಗೆ ಮಾತನಾಡಿದ […]