ಜಿಲ್ಲೆಯಾದ್ಯಂತ 55 ಪರೀಕ್ಷಾ ಕೇಂದ್ರಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ- 13,235 ವಿದ್ಯಾರ್ಥಿಗಳು ಹಾಜರು, 75 ಗೈರು
ಉಡುಪಿ: ಜಿಲ್ಲೆಯಾದ್ಯಂತ ಶುಕ್ರವಾರ ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭವಾಗಿದ್ದು ಮೊದಲ ದಿನ ಯಾವುದೇ ಗೊಂದಲಗಳು ಇಲ್ಲದಂತೆ ನಡೆಯಿತು. 55 ಪರೀಕ್ಷಾ ಕೇಂದ್ರಗಳಲ್ಲಿ ಮಾತೃ ಭಾಷೆ ವಿಷಯದಲ್ಲಿ ನಡೆದ ಪರೀಕ್ಷೆಯಲ್ಲಿ 13,235 ವಿದ್ಯಾರ್ಥಿಗಳು ಹಾಜರಾಗಿದ್ದರು.75 ಮಂದಿ ಗೈರಾಗಿದ್ದರು. ಬೆಳಿಗ್ಗೆ ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಉಡುಪಿಯ ಬೋರ್ಡ್ ಹೈಸ್ಕೂಲ್ ಪರೀಕ್ಷಾ ಕೇಂದ್ರಕ್ಕೆ ಭೇಟಿನೀಡಿ ಸೌಲಭ್ಯಗಳ ಪರಿಶೀಲನೆ ನಡೆಸಿದರು. ಮುನ್ನೆಚ್ಚರಿಕಾ ಕ್ರಮಗಳ ಪಾಲನೆಯ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಈ ಸಂದರ್ಭ ಡಿಡಿಪಿಐ ಗಣಪತಿ, ಡಯಟ್ ಅಧಿಕಾರಿ ಡಾ.ಅಶೋಕ್ ಕಾಮತ್ ಇದ್ದರು. ಮೊದಲ ದಿನದ ಪರೀಕ್ಷೆಯಲ್ಲಿ […]
ಉಡುಪಿ: ಕರ್ತವ್ಯ ನಿರತ ಮುಖ್ಯ ಪೇದೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ
ಉಡುಪಿ: ಕರ್ತವ್ಯ ನಿರತ ಮುಖ್ಯ ಪೇದೆಯೊಬ್ಬರು ತನ್ನ ಬಳಿಯಿದ್ದ ಸೇವಾ ಆಯುಧದಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆದಿ ಉಡುಪಿಯಲ್ಲಿ ನಡೆದಿದೆ. ಸಶಸ್ತ್ರ ಮೀಸಲು ಪೊಲೀಸ್ ಪಡೆಯ ಮುಖ್ಯ ಪೇದೆ ರಾಜೇಶ್ ಕುಂದರ್ ತನ್ನ ಸರ್ವೀಸ್ ರೈಫಲ್‌ನಿಂದ ಗುಂಡು ಹಾರಿಸಿಕೊಂಡ ವ್ಯಕ್ತಿ. ಇವರು ಆದಿ ಉಡುಪಿಯ ಶಾಲೆಯೊಂದರ ಎಸ್‌ಎಸ್‌ಎಲ್‌ಸಿ ಉತ್ತರ ಪತ್ರಿಕೆಗಳ ಕೊಠಡಿಯಲ್ಲಿ ಭದ್ರತಾ ಕರ್ತವ್ಯದಲ್ಲಿದ್ದರು. ಅವಳಿ-ಜವಳಿ ಮಕ್ಕಳ ತಂದೆಯಾಗಿರುವ ರಾಜೇಶ್ ಕುಂದರ್, ರಾತ್ರಿ ವೇಳೆಯಲ್ಲಿ ಹಣೆಯ ಭಾಗಕ್ಕೆ ಗುಂಡಿಟ್ಟುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು […]