ಉಡುಪಿ: ಕರ್ತವ್ಯ ನಿರತ ಮುಖ್ಯ ಪೇದೆಯೊಬ್ಬರು ತನ್ನ ಬಳಿಯಿದ್ದ ಸೇವಾ ಆಯುಧದಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆದಿ ಉಡುಪಿಯಲ್ಲಿ ನಡೆದಿದೆ.
ಸಶಸ್ತ್ರ ಮೀಸಲು ಪೊಲೀಸ್ ಪಡೆಯ ಮುಖ್ಯ ಪೇದೆ ರಾಜೇಶ್ ಕುಂದರ್ ತನ್ನ ಸರ್ವೀಸ್ ರೈಫಲ್‌ನಿಂದ ಗುಂಡು ಹಾರಿಸಿಕೊಂಡ ವ್ಯಕ್ತಿ.
ಇವರು ಆದಿ ಉಡುಪಿಯ ಶಾಲೆಯೊಂದರ ಎಸ್‌ಎಸ್‌ಎಲ್‌ಸಿ ಉತ್ತರ ಪತ್ರಿಕೆಗಳ ಕೊಠಡಿಯಲ್ಲಿ ಭದ್ರತಾ ಕರ್ತವ್ಯದಲ್ಲಿದ್ದರು. ಅವಳಿ-ಜವಳಿ ಮಕ್ಕಳ ತಂದೆಯಾಗಿರುವ ರಾಜೇಶ್ ಕುಂದರ್, ರಾತ್ರಿ ವೇಳೆಯಲ್ಲಿ ಹಣೆಯ ಭಾಗಕ್ಕೆ ಗುಂಡಿಟ್ಟುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆ ನಡೆದ ಸ್ಥಳಕ್ಕೆ ಹಿರಿಯ ಪೋಲೀಸ್ ಅಧಿಕಾರಿಗಳು ಡೌಡಾಯಿಸಿದ್ದಾರೆ.