ನೀವು SSLC/ITI ಪಾಸ್‌ ಮಾಡಿದ್ದೀರಾ? ಹಾಗಿದ್ದರೆ ಕೇಂದ್ರ ಸರ್ಕಾರದಲ್ಲಿದೆ ಉದ್ಯೋಗ

SSLC ಅಥವಾ ITI ಪಾಸ್ ಆದ ಯುವಕರಿಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಉದ್ಯೋಗ ಅವಕಾಶ ಲಭ್ಯವಾಗಿದೆ. Central Reserve Police Force (CRPF) ವತಿಯಿಂದ 2026ನೇ ಸಾಲಿನ ನೇಮಕಾತಿ ಅಧಿಸೂಚನೆ ಪ್ರಕಟವಾಗಿದ್ದು, ಕಾನ್‌ಸ್ಟೆಬಲ್ (ಟೆಕ್ನಿಕಲ್ & ಟ್ರೇಡ್ಸ್‌ಮನ್) ವಿಭಾಗದಲ್ಲಿ ಒಟ್ಟು 9,195 ಹುದ್ದೆಗಳು ಭರ್ತಿಯಾಗಲಿವೆ. ಈ ಪೈಕಿ 9,096 ಹುದ್ದೆಗಳು ಪುರುಷರಿಗೆ ಹಾಗೂ 79 ಹುದ್ದೆಗಳು ಮಹಿಳೆಯರಿಗೆ ಮೀಸಲಾಗಿವೆ. ಲಭ್ಯವಿರುವ ಹುದ್ದೆಗಳು ಟ್ರೇಡ್ಸ್‌ಮನ್ ವಿಭಾಗದಲ್ಲಿ ವಿವಿಧ ಹುದ್ದೆಗಳು ಪಯೋನಿಯರ್ ವಿಭಾಗ: ಅರ್ಹತೆ ಮತ್ತು ವಯೋಮಿತಿ ಅರ್ಜಿ ಶುಲ್ಕ […]

11 ಗಂಟೆಗೆ ಹೊರಬರಲಿದೆ ಎಸ್.ಎಸ್.ಎಲ್.ಸಿ. ರಿಸಲ್ಟ್: ವೆಬ್ ಸೈಟ್, ಡಿಜಿಲಾಕರ್ ಅಲ್ಲದೇ ಈ “ಆಪ್” ನಲ್ಲಿ ಬೇಗ ತಿಳೀಬೋದು ರಿಸಲ್ಟ್

ಬೆಂಗಳೂರು: ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ (KSEAB) 2026ರ ಎಸ್‌.ಎಸ್‌.ಎಲ್‌.ಸಿ ಫಲಿತಾಂಶ ಪ್ರಕಟಣೆಗೆ ಕ್ಷಣಗಣನೆ ಆರಂಭವಾಗಿದೆ. ಲಕ್ಷಾಂತರ ವಿದ್ಯಾರ್ಥಿಗಳು ತಮ್ಮ ಫಲಿತಾಂಶ ತಿಳಿಯಲು ತುದಿಗಾಲಿನಲ್ಲಿ ನಿಂತಿದ್ದಾರೆ. ರಿಸಲ್ಟ್ ಹೊರಬರುತ್ತಿದ್ದಂತೆ ಒಂದೇ ಸಮಯದಲ್ಲಿ ಲಕ್ಷಾಂತರ ಮಂದಿ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವುದರಿಂದ ಸರ್ವರ್ ಬ್ಯುಸಿ, ಸೈಟ್ ಹ್ಯಾಂಗ್ ಆಗುವ ಸಾಧ್ಯತೆ ಹೆಚ್ಚಾಗಿದೆ. ಫಲಿತಾಂಶದ ದಿನ karresults.nic.in ಮುಂತಾದ ಅಧಿಕೃತ ಪೋರ್ಟಲ್‌ಗಳು ನಿಧಾನಗತಿಯಾಗುವುದು ಸಾಮಾನ್ಯ. ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳು ಗಾಬರಿಯಾಗುವ ಅಗತ್ಯವಿಲ್ಲ. ವೆಬ್‌ಸೈಟ್ ಕಾರ್ಯನಿರ್ವಹಿಸದಿದ್ದರೂ ಫಲಿತಾಂಶವನ್ನು ಪಡೆಯಲು ಹಲವಾರು ಪರ್ಯಾಯ […]

ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳ ಅಂತಿಮ ವೇಳಾಪಟ್ಟಿ ಪ್ರಕಟ

ಬೆಂಗಳೂರು: SSLC ಮತ್ತು ದ್ವಿತೀಯ PUC ಪರೀಕ್ಷೆಯ ಅಂತಿಮ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಮಾರ್ಚ್ 25 ರಿಂದ ಏಪ್ರಿಲ್ 6 ರವರೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಮತ್ತು ಮಾರ್ಚ್ 1 ರಿಂದ ಮಾರ್ಚ್ 22 ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆಗಳು ನಡೆಯಲಿವೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯು ಅಧಿಕೃತ ಅಧಿಸೂಚನೆಯಲ್ಲಿ ತಿಳಿಸಿದೆ.

ವಿದ್ಯಾ ಟ್ಯುಟೋರಿಯಲ್: ಹತ್ತನೇ ತರಗತಿ ಉತ್ತೀರ್ಣರಾದವರಿಗೆ ನೇರವಾಗಿ ದ್ವಿತೀಯ ಪಿಯುಸಿ ಪರೀಕ್ಷೆಗೆ ಹಾಜರಾಗುವ ಅವಕಾಶ

ಉಡುಪಿ: ಹತ್ತನೇ ತರಗತಿಯಲ್ಲಿ ಉತ್ತೀರ್ಣರಾಗಿ, ಪ್ರಥಮ ಪಿಯುಸಿ ಪರೀಕ್ಷೆಯಲ್ಲಿ ಫೇಲಾಗಿದ್ದಲ್ಲಿ ಜನ್ಮ ದಿನಾಂಕ 31-03-2006 ರ ಮೊದಲು ಇದ್ದಲ್ಲಿ, ನೇರವಾಗಿ ದ್ವಿತೀಯ ಪಿಯುಸಿ ಪರೀಕ್ಷೆ ಕಟ್ಟುವ ಅಥವಾ 7,8,9 ನೇ ತರಗತಿಗಳಲ್ಲಿ ಫೇಲಾಗಿದ್ದರೆ, ನೇರವಾಗಿ ಹತ್ತನೇ ತರಗತಿ ಪರೀಕ್ಷೆ ಕಟ್ಟುವ ಅವಕಾಶವಿದೆ. 8 ನೇ ತರಗತಿಯಿಂದ ದ್ವಿತೀಯ ಪಿಯುಸಿ ವರೆಗೆ ತರಗತಿಗಳ ಪ್ರವೇಶಾತಿ ಪ್ರಾರಂಭವಾಗಿದೆ. ಸಂಪರ್ಕಿಸಿ: ಸತೀಶ್.ಎಸ್.ಕಾಡೋಳಿ, ವಿದ್ಯಾ ಟ್ಯುಟೋರಿಯಲ್ ಉಡುಪಿ. Ph: 98452 98165.

ಕಳೆದ ಎಂಟು ವರ್ಷಗಳಿಂದ ಟ್ರಿನಿಟಿ ಸೆಂಟ್ರಲ್ ಶಾಲೆಯಲ್ಲಿ ಶೇ. 100 ಫಲಿತಾಂಶ ಸಾಧನೆ

ಪೆರಂಪಳ್ಳಿ: ಟ್ರಿನಿಟಿ ಸೆಂಟ್ರಲ್ ಶಾಲೆಯು ಐ.ಸಿ.ಎಸ್.ಸಿ ಸ್ಟ್ರೀಮ್ ನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಸತತ 8 ವರ್ಷಗಳಿಂದ ಶೇ. 100 ಫಲಿತಾಂಶವನ್ನು ದಾಖಲಿಸಿಕೊಂಡು ಬಂದಿದೆ. 2021-22 ನೇ ಸಾಲಿನಲ್ಲಿ 50 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 24 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ, 26 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು, ಕುಮಾರಿ ರಾನಿಯಾ ಡಿ’ಸೋಜಾ 98.5 ಅಂಕಗಳಿಸಿ ಪ್ರಥಮ ಸ್ಥಾನವನ್ನು, ಕುಮಾರಿ ಡ್ಯಾಗ್ನಿ ಕ್ಯಾರಲ್ ನೊರೋನ್ಹಾ ಎರಡನೇ ಸ್ಥಾನವನ್ನು, ಹರ್ಷ ಯು ಪೂಜಾರಿ ಹಾಗೂ ಕನ್ನಿಕ ಮೂರನೇ ಸ್ಥಾನವನ್ನು ಹಂಚಿಕೊಂಡಿರುತ್ತಾರೆ. 11ವಿದ್ಯಾರ್ಥಿಗಳು […]