ನೀವು SSLC/ITI ಪಾಸ್‌ ಮಾಡಿದ್ದೀರಾ? ಹಾಗಿದ್ದರೆ ಕೇಂದ್ರ ಸರ್ಕಾರದಲ್ಲಿದೆ ಉದ್ಯೋಗ

SSLC ಅಥವಾ ITI ಪಾಸ್ ಆದ ಯುವಕರಿಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಉದ್ಯೋಗ ಅವಕಾಶ ಲಭ್ಯವಾಗಿದೆ. Central Reserve Police Force (CRPF) ವತಿಯಿಂದ 2026ನೇ ಸಾಲಿನ ನೇಮಕಾತಿ ಅಧಿಸೂಚನೆ ಪ್ರಕಟವಾಗಿದ್ದು, ಕಾನ್‌ಸ್ಟೆಬಲ್ (ಟೆಕ್ನಿಕಲ್ & ಟ್ರೇಡ್ಸ್‌ಮನ್) ವಿಭಾಗದಲ್ಲಿ ಒಟ್ಟು 9,195 ಹುದ್ದೆಗಳು ಭರ್ತಿಯಾಗಲಿವೆ. ಈ ಪೈಕಿ 9,096 ಹುದ್ದೆಗಳು ಪುರುಷರಿಗೆ ಹಾಗೂ 79 ಹುದ್ದೆಗಳು ಮಹಿಳೆಯರಿಗೆ ಮೀಸಲಾಗಿವೆ.

ಲಭ್ಯವಿರುವ ಹುದ್ದೆಗಳು

ಟ್ರೇಡ್ಸ್‌ಮನ್ ವಿಭಾಗದಲ್ಲಿ ವಿವಿಧ ಹುದ್ದೆಗಳು

  • ಡ್ರೈವರ್
  • ಕುಕ್
  • ಗಾರ್ಡನರ್
  • ವಾಶರ್‌ಮನ್
  • ಕ್ಲೀನರ್
  • ಫಿಟ್ಟರ್
  • ಟೈಲರ್
  • ಪೇಂಟರ್
  • ಕಾರ್ಪೆಂಟರ್
  • ಹೇರ್ ಡ್ರೆಸ್ಸರ್
  • ಸಫಾಯಿ ಕರ್ಮಚಾರಿ
  • ಬ್ರಾಸ್ ಬ್ಯಾಂಡ್

ಪಯೋನಿಯರ್ ವಿಭಾಗ:

  • ಎಲೆಕ್ಟ್ರಿಷಿಯನ್
  • ಮೋಟಾರ್ ಮೆಕಾನಿಕ್
  • ಪ್ಲಂಬರ್

ಅರ್ಹತೆ ಮತ್ತು ವಯೋಮಿತಿ

  • ಕನಿಷ್ಠ: SSLC / 10ನೇ ತರಗತಿ ಪಾಸ್ + ITI ಅಥವಾ ಟ್ರೇಡ್ ಪ್ರಮಾಣಪತ್ರ
  • ವಯಸ್ಸು:
    • ಸಾಮಾನ್ಯ ಹುದ್ದೆಗಳು: 18 – 23 ವರ್ಷ
    • ಡ್ರೈವರ್: 21 – 27 ವರ್ಷ
  • ವಯೋ ಸಡಿಲಿಕೆ:
    • SC/ST: 5 ವರ್ಷ
    • OBC: 3 ವರ್ಷ

ಅರ್ಜಿ ಶುಲ್ಕ

  • General / OBC / EWS: ₹100
  • SC/ST ಮತ್ತು ಮಹಿಳೆಯರು: ಶುಲ್ಕವಿಲ್ಲ

ಪ್ರಮುಖ ದಿನಾಂಕಗಳು

ಏಪ್ರಿಲ್ 20, 2026 ರಿಂದ ಅರ್ಜಿ ಸಲ್ಲಿಸಲು ಆರಂಭವಾಗಿದ್ದು, ಮೇ 19, 2026 ಕೊನೆಯ ದಿನವಾಗಿದೆ. ಅಧಿಕೃತ CRPF Recruitment Portal ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಆಯ್ಕೆ ಪ್ರಕ್ರಿಯೆ (5 ಹಂತಗಳು)

  1. PET/PST – ದೈಹಿಕ ಪರೀಕ್ಷೆ
  2. CBT – 100 ಪ್ರಶ್ನೆಗಳು / 100 ಅಂಕ
    • 4 ತಪ್ಪು ಉತ್ತರಗಳಿಗೆ 1 ಅಂಕ ನೆಗೆಟಿವ್
  3. ಟ್ರೇಡ್/ಸ್ಕಿಲ್ ಟೆಸ್ಟ್
  4. ದಾಖಲೆ ಪರಿಶೀಲನೆ
  5. ವೈದ್ಯಕೀಯ ಪರೀಕ್ಷೆ

ವೇತನ ಶ್ರೇಣಿ

Pay Level-3: ₹21,700 – ₹69,100 ಇದ್ದು, ಅದರೊಂದಿಗೆ, ಭತ್ಯೆಗಳು, ಪಿಎಫ್, ಗ್ರಾಚ್ಯುಟಿ ಮುಂತಾದ ಸೌಲಭ್ಯಗಳಿವೆ. ಹೆಚ್ಚಿನ ಮಾಹಿತಿಗೆ: 011-26160255 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.