ಕಂಬಳದಲ್ಲಿ ನೂತನ ಅಮೋಘ ದಾಖಲೆ ಬರೆದ ಶ್ರೀನಿವಾಸ್ ಗೌಡ; ಕೇವಲ 8.96 ಸೆಕೆಂಡ್ 100 ಮೀ. ಓಟ

ಬೆಳ್ತಂಗಡಿ: ಇಲ್ಲಿನ ವೇಣೂರಿನಲ್ಲಿ ಶನಿವಾರ ಪ್ರಾರಂಭಗೊಂಡ ಸೂರ್ಯ-ಚಂದ್ರ ಜೋಡುಕರೆ ಕಂಬಳದಲ್ಲಿ ನೂತನ‌ ಸರ್ವ ಶ್ರೇಷ್ಠ ದಾಖಲೆ ನಿರ್ಮಾಣವಾಗಿದೆ. ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡರು 100 ಮೀ. ಉದ್ದದವನ್ನು  ಕೇವಲ 8.96 ಸೆಕಂಡ್ ನಲ್ಲಿ ಕ್ರಮಿಸಿ ಈ ಹಿಂದಿನ‌ ಎಲ್ಲಾ ದಾಖಲೆಗಳನ್ನು ಪುಡಿ ಮಾಡಿದ್ದಾರೆ. ಕಳೆದ ವರ್ಷ ಐಕಳ ಕಂಬಳದಲ್ಲಿ ಇರುವೈಲು ಪಾಣಿಲ ಬಾಡ ಪೂಜಾರಿ ಅವರ ಕೋಣಗಳನ್ನು ಓಡಿಸುವ ಮೂಲಕ ಸಾಧನೆ ಮಾಡಿದ್ದ ಶ್ರೀನಿವಾಸ ಗೌಡರು ಇಂದು ಅವರದ್ದೇ ಕೋಣಗಳನ್ನು ಓಡಿಸುವ ಮೂಲಕ ಈ ವಿನೂತನ ದಾಖಲೆಯನ್ನು […]