ಬಾಳೆಹಣ್ಣು ಪ್ರಿಯ ಪೆರ್ಡೂರು ಅನಂತಪದ್ಮನಾಭ ದೇಗುಲದಲ್ಲಿ ಮಾ.17ಕ್ಕೆ ಶ್ರೀಮನ್ಮಹಾರಥೋತ್ಸವ: “ಮದುಮಕ್ಕಳ ಜಾತ್ರೆ’ಗಿದೆ ವಿಶೇಷ ಮನ್ನಣೆ
ಇತಿಹಾಸ ಪ್ರಸಿದ್ಧ ಪೆರ್ಡೂರಿನ ಅನಂತಪದ್ಮನಾಭ ಮೂರ್ತಿ ಕಪ್ಪುಕಲ್ಲಿನಲ್ಲಿ ಕೆತ್ತಲಾಗಿದೆ. ಸುಮಾರು ಮೂರು ಅಡಿ ಎತ್ತರದ ಈ ಮೂರ್ತಿ ನಿಂತ ಭಂಗಿಯಲ್ಲಿದ್ದು ಶಂಖ ಚಕ್ರ ಗದಾ ಪದ್ಮ ಭರಿಯಾದ ವಿಗ್ರಹವಾಗಿದೆ. ಹೊಕ್ಕುಳಿನ ಭಾಗದಲ್ಲಿ ಪದ್ಮದ ಚಿಹ್ನೆಗಳಿವೆ. ವಿಗ್ರಹದ ಮೆಲ್ಭಾಗದ ಸುತ್ತ ನಾಗ ದೇವರ ಹೆಡೆ ಚಿತ್ರಿಸಲಾಗಿದೆ. ಹಿಂದುಗಳ ಪವಿತ್ರ ಕ್ಷೇತ್ರವಾದ ತಿರುಮಲವಾಸ ತಿಮ್ಮಪ್ಪನ ಹರಕೆ, ತಪ್ಪು ಮಾಡಿದವರು ಧರ್ಮಸ್ಥಳ ಮಂಜುನಾಥನಿಗೆ ಹಾಕುತ್ತಿದ್ದ ತಪ್ಪು ಕಾಣಿಕೆಗಳು ಕೂಡ ಇಲ್ಲಿ ಹಾಕುತ್ತಿದ್ದರು ಎಂಬ ನಂಬಿಕೆಯು ಇದೆ.ರೋಗ ರುಜಿನಗಳಿಗೆ ಸಂತಾನ ಭಾಗ್ಯಕ್ಕೆ, ಆರೋಗ್ಯ, […]