ಎಳ್ಳಾರೆ ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದಲ್ಲಿ ವಾರ್ಷಿಕ ಮಹೋತ್ಸವ
ಕಾರ್ಕಳ ತಾಲೂಕಿನ ಎಳ್ಳಾರೆ ಗ್ರಾಮದ ಸುಮಾರು 1,450 ವರ್ಷಗಳ ಹಿಂದಿನ ಇತಿಹಾಸವಿರುವ ಎರಡನೇ ವೈಕುಂಠ ಖ್ಯಾತಿಯ ಶ್ರೀಕ್ಷೇತ್ರ ಇರ್ವತ್ತೂರು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ ಎ. 8ರಿಂದ ಆರಂಭಗೊಂಡಿದ್ದು ಎ.18ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಇಲ್ಲಿ ಪ್ರಧಾನ ದೇವರಾಗಿ ಅಂಗೈಯಲ್ಲಿ ಅನ್ನ ಮುದ್ದೆ ಹಿಡಿದು ನಿಂತಿರುವ ಶ್ರೀ ಲಕ್ಷ್ಮೀ ಜನಾರ್ದನ ದೇವರು ಹಾಗೂ ಪರಿವಾರ ದೇವರಾಗಿ ಶ್ರೀ ಮಹಾಗಣಪತಿ, ಶ್ರೀ ಜಲದುರ್ಗೆ ಹಾಗೂ ಪರಿವಾರ ದೈವಗಳಿದ್ದು, ನಿತ್ಯ ತ್ರಿಕಾಲ ಪೂಜೆ, […]