ಶ್ರೀ ಕೃಷ್ಣ ದೇವರಿಗೆ “ಗಜಲಕ್ಷ್ಮೀ ” ಅಲಂಕಾರ
ಉಡುಪಿ: ಶ್ರೀ ಕೃಷ್ಣ ಮಠದಲ್ಲಿ ಸೋದೆ ಮಠದ ಶ್ರೀ ಶ್ರೀ ವಿಶ್ವವಲ್ಲಭ ತೀರ್ಥರು ನವರಾತ್ರಿಯ ಪ್ರಯುಕ್ತ ಶ್ರೀ ಕೃಷ್ಣ ದೇವರಿಗೆ “ಗಜಲಕ್ಷ್ಮೀ ” ಅಲಂಕಾರ ಮಾಡಿದರು. ಪರ್ಯಾಯ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಲಕ್ಷ ತುಳಸಿ ಅರ್ಚನೆ ಮಾಡಿ, ಮಹಾಪೂಜೆಯನ್ನು ನೆರವೇರಿಸಿದರು.
ಶ್ರೀ ಕೃಷ್ಣ ಮಠ: “ನೃತ್ಯಾಂಜಲಿ” ಕಾರ್ಯಕ್ರಮ
ಉಡುಪಿ: ಪರ್ಯಾಯ ಶ್ರೀ ಪಲಿಮಾರು ಮಠದ ಆಶ್ರಯದಲ್ಲಿ, ಉಡುಪಿಯ ಹೆಜ್ಜೆ-ಗೆಜ್ಜೆ ಪ್ರತಿಷ್ಠಾನ(ರಿ) ಇದರ ರಜತ ಮಹೋತ್ಸವದ ಅಂಗವಾಗಿ ಕುಂದಾಪುರದ ನೃತ್ಯ ವಸಂತ ನಾಟ್ಯಾಲಯದ ವಿದುಷಿ ಪ್ರವೀತಾ ಅಶೋಕ್ ರವರ ಶಿಷ್ಯರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಿತು.
ಪಂಚಭಾಷೆಗಳಲ್ಲಿ ಭಾಗವತ ಮೊಬೈಲ್ ಆ್ಯಪ್ ಉದ್ಘಾಟನೆ
ಉಡುಪಿ: ಉಡುಪಿಯ ಶ್ರೀಮನ್ಮಧ್ವಸಿದ್ಧಾಂತ ಪ್ರಬೋಧಕ ಸಂಸ್ಕೃತ ಸಂಶೋಧನ ಕೇಂದ್ರವು ಐದು ಭಾಷೆಗಳಲ್ಲಿ ಭಾಗವತದ ಅಪ್ಲಿಕೇಶನನ್ನು ಸಿದ್ಧಪಡಿಸಿದ್ದು ಇದರ ಉದ್ಘಾಟನಾ ಸಮಾರಂಭವು ಕೃಷ್ಣಮಠದಲ್ಲಿ ಜರಗಿತು. ಶ್ರೀ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಉದ್ಘಾಟಿಸಿದರು.ಸಂಶೋಧನ ಕೇಂದ್ರದ ನಿರ್ದೇಶಕರಾದ ಡಾ.ಕಡಂದಲೆ ಗಣಪತಿ ಭಟ್ ಆ್ಯಪ್ ನ ಬಗ್ಗೆ ತಿಳಿಸಿದರು.