ಕೃಷ್ಣಮಠದಲ್ಲಿ ಸದ್ಯ ಸಾರ್ವಜನಿಕ ದರ್ಶನಕ್ಕೆ ಅವಕಾಶ ಇಲ್ಲ: ಜುಲೈ ಬಳಿಕ ಮುಂದಿನ ತೀರ್ಮಾನ: ಈಶಪ್ರಿಯ ಸ್ವಾಮೀಜಿ
ಉಡುಪಿ: ರಾಜ್ಯ ಸರ್ಕಾರ ಜೂನ್ 8ರಿಂದ ದೇವಸ್ಥಾನಗಳಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಿದೆ. ಆದರೆ ಉಡುಪಿ ಶ್ರೀಕೃಷ್ಣಮಠದಲ್ಲಿ ಜನರು ದೇವರ ದರ್ಶನ ಪಡೆಯಲು ಇನ್ನೂ 20ರಿಂದ 30 ದಿನಗಳ ತನಕ ಕಾಯಬೇಕಾಗಿದೆ. ಸದ್ಯಕ್ಕೆ ಕೃಷ್ಣಮಠ ತೆರೆಯುವುದಿಲ್ಲ. ಈ ಬಗ್ಗೆ ಉಡುಪಿ ಶ್ರೀಕೃಷ್ಣಮಠ ಪರ್ಯಾಯ ಅದಮಾರು ಮಠದ ಈಶಪ್ರಿಯ ಸ್ವಾಮೀಜಿ ವಿಡಿಯೋ ಹೇಳಿಕೆ ಮೂಲಕ ಮಾಹಿತಿ ನೀಡಿದ್ದಾರೆ. ಭಕ್ತರ ಹಿತದೃಷ್ಟಿಯಿಂದ ಹಾಗೂ ಕೊರೊನಾ ಸೋಂಕು ಹರಡುವುದನ್ನು ನಿಯಂತ್ರಿಸುವ ಉದ್ದೇಶದಿಂದ ನಾವು ಇನ್ನೂ ಒಂದು ತಿಂಗಳ ಕಾಲ ಕಾಯುತ್ತೇವೆ. ಮುಂದಿನ […]