ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಶ್ರೀಕೃಷ್ಣಮಠಕ್ಕೆ ಭೇಟಿ

ಉಡುಪಿ: ಶ್ರೀಕೃಷ್ಣ ಮಠಕ್ಕೆ ಕೇಂದ್ರ ಸರ್ಕಾರದ  ರಕ್ಷಣಾ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಇವರು ಕೃಷ್ಣ ಮಠಕ್ಕೆ ಆಗಮಿಸಿ ದೇವರ ದರ್ಶನ ಮಾಡಿ ಪರ್ಯಾಯ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರಿಂದ ಅನುಗ್ರಹ ಮಂತ್ರಾಕ್ಷತೆ ಪಡೆದರು. ಈ ಸಂದರ್ಭದಲ್ಲಿ ಶಾಸಕರಾದ ರಘುಪತಿ ಭಟ್, ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿ.ಜೆ.ಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ, ಬಿ.ಜೆ.ಪಿ ಮುಖಂಡರಾದ ಉದಯಕುಮಾರ್ ಶೆಟ್ಟಿ, ಶ್ರೀಶ ನಾಯಕ್, ಪ್ರದೀಪ್ ರಾವ್, ವಿಜಯ್ ಭಟ್, ಭಾರತಿಶೆಟ್ಟಿ, ಸುವರ್ಧನ್ ನಾಯಕ್, ಪರ್ಯಾಯ ಮಠದ ಪಿ.ಆರ್.ಓ ಶ್ರೀಶ ಭಟ್ […]

ಮಾ.13ರಿಂದ ಶ್ರೀಕೃಷ್ಣಮಠದ ಗರ್ಭಗುಡಿ ಮೇಲ್ಛಾವಣಿಗೆ ಚಿನ್ನದ ತಗಡು ಅಳವಡಿಕೆ ಕಾರ್ಯ ಆರಂಭ

ಉಡುಪಿ: ಇಲ್ಲಿನ ಶ್ರೀಕೃಷ್ಣಮಠದ ಗರ್ಭಗುಡಿಯ ಮೇಲ್ಛಾವಣಿಗೆ ಬಂಗಾರದ ಹೊದಿಕೆ ಅಳವಡಿಸುವ ಕಾರ್ಯ ಮಾ. 13ರಿಂದ ಆರಂಭಗೊಳ್ಳಲಿದೆ ಎಂದು ಪರ್ಯಾಯ ಪಲಿಮಾರು ಮಠದ ವಿದ್ಯಾಧೀಶ ಸ್ವಾಮೀಜಿ ಹೇಳಿದರು. ಅವರು ಶುಕ್ರವಾರ ಉಡುಪಿ ಶ್ರೀಕೃಷ್ಣಮಠದ ಕನಕ ಮಂಟಪದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು. ಗರ್ಭಗುಡಿಯ ಮೇಲ್ಛಾವಣಿ ನವೀಕರಣ ಕಾರ್ಯಕ್ಕೂ ಮುಂಚೆ ದೇವರಿಗೆ ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಆ ಬಳಿಕ ಗರ್ಭಗುಡಿಯ ಶಿಖರ ಕಲಶವನ್ನು ಕೆಳಗಿಳಿಸಿ ಚಿನ್ನ ಲೆಪಿತ ತಗಡು ಅಳವಡಿಸುವ ಕಾರ್ಯಕ್ಕೆ ಚಾಲನೆ ನೀಡಲಾಗುವುದು. ಈ ನವೀಕರಣ ಕಾರ್ಯಕ್ಕೂ […]

ಈಗಿನ ದೇವರ ಪೂಜೆಯಲ್ಲಿ ಬರೇ ತಂತ್ರ, ಮಂತ್ರ ಇಲ್ಲ: ವಿದ್ಯಾಧೀಶ ಸ್ವಾಮೀಜಿ

ಉಡುಪಿ: ಇಂದು ದೇವರಿಗೆ ಸಲ್ಲಿಸುವ ಪೂಜೆಯಲ್ಲಿ ತಂತ್ರ ಇದೆಯೇ ಹೊರತು ಮಂತ್ರಗಳಿಲ್ಲ. ಮಂತ್ರ ಇಲ್ಲದಿರುವ ಪೂಜೆಯನ್ನು ದೇವರು ಇಷ್ಟ ಪಡುವುದಿಲ್ಲ. ಹಾಗಾಗಿ ಮಂತ್ರಘೋಷ್ಯದೊಂದಿಗೆ ದೇವರಿಗೆ ಪೂಜೆ ಮಾಡಬೇಕು ಎಂದು ಪರ್ಯಾಯ ಪಲಿಮಾರು ಮಠದ ವಿದ್ಯಾಧೀಶ ಸ್ವಾಮೀಜಿ ಹೇಳಿದರು. ವಿದ್ವಾಂಸ ಸೂರ್ಯಪ್ರಕಾಶ ರಾವ್‌ ರಚಿಸಿದ ಶ್ರೌತವಿಷ್ಣುಪೂಜಾವಿಧಿವರ್ಣನಂ (ತಂತ್ರಸಾರರೀತ್ಯಾ) ಗ್ರಂಥವನ್ನು ಉಡುಪಿ ಕೃಷ್ಣಮಠದ ರಾಜಾಂಗಣದಲ್ಲಿ ಗುರುವಾರ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಯಾವ ಮಂತ್ರದಲ್ಲಿ ದೋಷವಿಲ್ಲ, ಆ ಮಂತ್ರವನ್ನು ಪಠಣ ಮಾಡಿಕೊಂಡು ಭಗವಂತನನ್ನು ಆರಾಧಿಸಬೇಕು. ಆ ಮಾತ್ರ ಭಗವಂತನ ಅನುಗ್ರಹ ಪಡೆಯಲು […]

ಇಂದು ಉಡುಪಿ ಶ್ರೀಕೃಷ್ಣ ಮಠಕ್ಕೆ ಪ್ರಧಾನಿ ಮೋದಿ ಸಹೋದರ, ಪ್ರಹ್ಲಾದ್ ಮೋದಿ ಭೇಟಿ

 ಉಡುಪಿ: ಭಾರತವನ್ನು ವಿಶ್ವವೇ ಗುರುತಿಸುವಂತೆ ಮಾಡಿದ್ದು ಎನ್ ಡಿಎ ಸರ್ಕಾರದ ದೊಡ್ಡ ಸಾಧನೆ. ಸ್ವಾತಂತ್ರ್ಯಾನಂತರ ಇದು ಸಾಧ್ಯವಾಗಿರಲಿಲ್ಲ. ಕಳೆದ ಐದು ವರ್ಷಗಳಿಂದ ಎನ್ ಡಿಎ ಸರ್ಕಾರ ಉತ್ತಮ ಕೆಲಸ ಮಾಡಿದೆ. ಅಲ್ಲದೆ ಸರ್ಕಾರದ ಕಾರ್ಯವೈಖರಿಯ ಬಗ್ಗೆ ಜನರಿಗೆ ಖುಷಿ ಇದೆ. ಹಾಗಾಗಿ ಮತ್ತೊಮ್ಮೆ ಮೋದಿ ಪ್ರಧಾನಿಯಾಗಲಿ ಎಂದು ಜನತೆ ಬಯಸುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಸಹೋದರ ಪ್ರಹ್ಲಾದ್ ಮೋದಿ ಹೇಳಿದರು. ಅವರು ಇಂದು ಉಡುಪಿ ಶ್ರೀಕೃಷ್ಣಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಆರ್ಥಿಕ ನೀತಿಯನ್ನು […]