ಸ್ವಾವಲಂಬಿ ಭಾರತ ವತಿಯಿಂದ ಮಿನಿ ಉದ್ಯೋಗ ಮೇಳ ಕಾರ್ಯಕ್ರಮ
ಉಡುಪಿ: ಶ್ರೀ ಜಗದ್ಗುರು ನಿತ್ಯಾನಂದ ಸ್ವಾಮಿ ಮಂದಿರ ಮಠದ ಆಶ್ರಯದಲ್ಲಿ, ರಾಷ್ಟ್ರೀಯ ಪದವಿ ಪೂರ್ವ ವಿದ್ಯಾರ್ಥಿಗಳ, ಪೋಷಕರ ಮತ್ತು ಶಿಕ್ಷಕರ ಸಂಘ, ಸ್ವಾವಲಂಬಿ ಭಾರತ ಉಡುಪಿ ಜಿಲ್ಲೆ ಮತ್ತು ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಶನ್, ಉಡುಪಿ ವಲಯ ಇದರ ಸಹಯೋಗದಲ್ಲಿ ಮಿನಿ ಉದ್ಯೋಗ ಮೇಳವು ಜ. 29 ನೂತನವಾಗಿ ಉದ್ಘಾಟನೆಗೊಂಡ ಭಗವಾನ್ ನಿತ್ಯಾನಂದ ಸ್ವಾಮಿ ಮಂದಿರದ ಸಭಾಂಗಣದಲ್ಲಿ ನಡೆಯಿತು. ಭಗವಾನ್ ನಿತ್ಯಾನಂದ ಸ್ವಾಮಿ ಮಂದಿರದ ಕಾರ್ಯಾಧ್ಯಕ್ಷ ದಿವಾಕರ್ ಶೆಟ್ಟಿ ತೋಟದಮನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಹಾರೈಸಿದರು. ಮುಖ್ಯ ಅಥಿತಿಗಳಾಗಿ […]
ಎಸ್.ಕೆ.ಪಿ.ಎ ವತಿಯಿಂದ ಸಹಕಾರ ರತ್ನ ಜಯಕರ್ ಶೆಟ್ಟಿ ಇಂದ್ರಾಳಿ ಇವರಿಗೆ ಗೌರವಾಭಿನಂದನೆ
ಉಡುಪಿ: ಪ್ರತಿಷ್ಠಿತ ಸಹಕಾರ ರತ್ನ ಪ್ರಶಸ್ತಿಗೆ ಭಾಜನರಾದ ಜಯಕರ ಶೆಟ್ಟಿ ಇಂದ್ರಾಳಿ ಇವರಿಗೆ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಉಡುಪಿ ವಲಯದಿಂದ ಗೌರವಾಭಿನಂದನೆ ಸಲ್ಲಿಸಲಾಯಿತು. ಜಯಕರ್ ಶೆಟ್ಟಿ ಇಂದ್ರಾಳಿ ಇವರು ಆರಂಭದಿಂದಲೂ ಛಾಯಾಗ್ರಾಹಕರ ಸಂಘಕ್ಕೆ ನೀಡಿರುವ ಸಹಕಾರಕ್ಕಾಗಿ ಸರ್ವ ಛಾಯಾಗ್ರಾಹಕರ ಪರವಾಗಿ ಅವರನ್ನು ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಉಡುಪಿ ಶಾಖೆಯ ಪ್ರಬಂಧಕ ರಾಘವೇಂದ್ರ ಉಪಾಧ್ಯಾಯ, ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ವಾಮನ ಪಡುಕೆರೆ, ಉಪಾಧ್ಯಕ್ಷ […]
ವೃತ್ತಿ ನಿರತ ಛಾಯಾಗ್ರಾಹಕರಿಂದ ಛಾಯಾ ಧರ್ಮ ಜಾಗೃತಿ ಅಭಿಯಾನ: ಎಸೆದ ದೇವರ ಹಳೆ ಫೋಟೋಗಳಿಗೆ ಗೌರವಯುತ ವಿದಾಯ
ಉಡುಪಿ: ಜನರ ಅಂದ ಚೆಂದದ ಛಾಯಾಚಿತ್ರಗಳನ್ನು ತಮ್ಮ ಕ್ಯಾಮರಾ ಕಣ್ಣುಗಳಲ್ಲಿ ಸೆರೆಹಿಡಿದು ನೆನಪುಗಳನ್ನು ಶಾಶ್ವತವಾಗಿಸುವ ಛಾಯಾಗ್ರಾಹಕರು ಹೊಸ ಅಭಿಯಾನವೊಂದನ್ನು ಹುಟ್ಟು ಹಾಕಿದ್ದು, ಇದಕ್ಕೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ಪ್ರಾಪ್ತವಾಗಿದೆ. ಮನೆ ಕಚೇರಿಗಳಲ್ಲಿ ಹಲವಾರು ವರ್ಷಗಳವರೆಗೆ ಪೂಜಿಸಲ್ಪಟ್ಟು ವಿರೂಪವಾಗಿ ಎಸೆದಿರುವಂತಹ ದೇವರ ಚಿತ್ರಗಳನ್ನು ವಿಶಿಷ್ಟ ರೀತಿಯಲ್ಲಿ ವಿಲೇವಾರಿ ಮಾಡಿ ಜನರಿಂದ ಪ್ರಶಂಸೆ ಪಡೆಯುತ್ತಿದ್ದಾರೆ. ಸಾರ್ವಜನಿಕರು ಒಂದು ಕಾಲದಲ್ಲಿ ಪೂಜಿಸಿ ಆರಾಧಿಸಿ ಇನ್ನು ಬೆಡವೆಂದು ಎಸೆದ ದೇವರ ಹಳೆಯ ಫೋಟೋಗಳು, ಒಡೆದ ಗ್ಲಾಸಿನ ಫ್ರೇಮ್ ಗಳು, ಭಿನ್ನವಾದ ಮೂರ್ತಿಗಳು, ತುಕ್ಕು […]
ವೃತ್ತಿಯಲ್ಲಿ ನಿಷ್ಠೆ- ಪ್ರಾಮಾಣಿಕತೆ ಇದ್ದಾಗ ಗೌರವ ಹೆಚ್ಚಾಗುವುದು: ಡಾ. ಹರೀಶ್ಚಂದ್ರ
ಉಡುಪಿ: ವೃತ್ತಿಯನ್ನು ಪ್ರೀತಿಸಿ, ನಿಷ್ಠೆಯಿಂದ ಮತ್ತು ಪ್ರಾಮಾಣಿಕತೆಯಿಂದ ತನ್ನನ್ನು ಸಮರ್ಪಿಸಿಕೊಂಡಾಗ ವೃತ್ತಿ ಗೌರವವೂ ಮತ್ತು ವ್ಯಕ್ತಿ ಗೌರವವೂ ಹೆಚ್ಚಾಗುತ್ತದೆ ಎಂದು ಗಾಂಧಿ ಆಸ್ಪತ್ರೆಯ ಎಮ್.ಡಿ ಡಾ. ಹರೀಶ್ಚಂದ್ರ ಅಭಿಪ್ರಾಯಪಟ್ಟರು. ಅವರು ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೆಶನ್ ಉಡುಪಿ ವಲಯ ಹಮ್ಮಿಕೊಂಡಿದ್ದ ಛಾಯಾಚಿತ್ರ ಸ್ಪರ್ಧೆಯ ಬಹುಮಾನ ವಿತರಣೆ ಮತ್ತು ಶಿಕ್ಷಕರ ದಿನಾಚರಣೆಯ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಮತ್ತೋರ್ವ ಅತಿಥಿ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಕ್ಲಿಫರ್ಡ್ ಲೋಬೋ ಮಾತನಾಡಿ, ಪ್ರವಾಸೋದ್ಯಮಕ್ಕೂ ಛಾಯಾಚಿತ್ರಗ್ರಾಹಕರಿಗೂ ಅವಿನಾಭಾವ ಸಂಬಂಧವಿದೆ. ಛಾಯಾಗ್ರಹಣದ ಮೂಲಕ […]
ತಾಳ್ಮೆ ಸಂವೇದನಾಶೀಲತೆಯಿಂದ ಉತ್ಕೃಷ್ಟ ಚಿತ್ರಗಳನ್ನು ಸೆರೆಹಿಡಿಯುವ ಛಾಯಾಗ್ರಾಹರ ಕಾರ್ಯ ಮೆಚ್ಚುವಂಥದ್ದು-ರೊ। ಬಾಲಕೃಷ್ಣ ಮದ್ದೋಡಿ
ಉಡುಪಿ: ಛಾಯಾಚಿತ್ರದಲ್ಲಿನ ನೈಪುಣ್ಯ,ವೈಜ್ಞಾನಿಕತೆ ಮತ್ತು ತಾಂತ್ರಿಕತೆ ಹಾಗೂ ಭಾವನಾತ್ಮಕ ಸಂವೇದನಾಶೀಲತೆ ಇವೆಲ್ಲವನ್ನೂ ನಾವು ಗುರುತಿಸಿಕೊಂಡಾಗ ಮಾತ್ರ ಛಾಯಾಗ್ರಹಣ ಎನ್ನುವುದು ಎಷ್ಟು ವಿಶಿಷ್ಟವಾದದ್ದು ಎಂಬ ಅರಿವು ನಮಗಾಗುತ್ತದೆ. ಹಾಗಾಗಿ ಛಾಯಾಗ್ರಹಣ ವೃತ್ತಿ ಮಾಡುವ ಎಲ್ಲ ಛಾಯಾಗ್ರಾಹಕರು ಅಭಿನಂದನಾರ್ಹರು ಎಂದು ಉಡುಪಿ ರೋಟರಿ ರೋಯಲ್ ನ ಅಧ್ಯಕ್ಷ ರೊ। ಬಾಲಕೃಷ್ಣ ಮದ್ದೋಡಿ ಅಭಿಪ್ರಾಯಪಟ್ಟರು. ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಉಡುಪಿ ವಲಯ, ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಉಡುಪಿ, ರೋಟರಿ ಉಡುಪಿ ರೋಯಲ್ ಸಂಯುಕ್ತವಾಗಿ ಆಯೋಜಿಸಿದ್ದ ವಿಶ್ವಛಾಯಾಗ್ರಹಣ ದಿನ ಕಾರ್ಯಕ್ರಮದಲ್ಲಿ […]