ಬಿಹಾರದ ನಿಗೂಢ ಗುಹೆಯಲ್ಲಿದೆ ಅಪರಿಮಿತ ಸ್ವರ್ಣ ಭಂಡಾರ? 1500 ವರ್ಷಗಳ ಹಿಂದಿನ ರಹಸ್ಯದಿಂದ ಪರದೆ ಸರಿಸಲು ಯಾರಿಂದಲೂ ಸಾಧ್ಯವಾಗಿಲ್ಲ!
ಬಿಹಾರದ ರಾಜ್‌ಗಿರ್‌ನಲ್ಲಿರುವ ವೈಭಾರ್ ಬೆಟ್ಟಗಳಲ್ಲಿ ಮಾನವ ನಿರ್ಮಿತ ಗುಹೆಗಳು ಸಾವಿರಾರು ವರ್ಷಗಳಿಂದಲೂ ಜನರನ್ನು ಆಕರ್ಷಿಸುತ್ತಿದೆ. ಸ್ವರ್ಣ ಭಂಡಾರವೆನ್ನುವ ಹೆಸರಿನಿಂದ ಕರೆಸಿಕೊಳ್ಳುವ ಈ ಗುಹೆಯಲ್ಲಿ ಲೆಕ್ಕವಿಲ್ಲದಷ್ಟು ಅತ್ಯಮೂಲ್ಯ ಸ್ವರ್ಣದ ಖಜಾನೆಯನ್ನು ಬಚ್ಚಿಡಲಾಗಿದೆ ಎನ್ನುವುದೇ ಈ ಗುಹೆಯನ್ನು ಸಹಸ್ರಾರು ಜನರನ್ನು ಇತ್ತ ಆಕರ್ಷಿಸುತ್ತಿರುವುದು. ದಂತಕಥೆಗಳ ಪ್ರಕಾರ ಈ ಗುಹೆಯನ್ನು ವೈರದೇವ ಎಂಬ ಜೈನ ಸನ್ಯಾಸಿಯೊಬ್ಬರು ನಿರ್ಮಿಸಿದ್ದು, ತನ್ನ ಧ್ಯಾನಕ್ಕಾಗಿ ಈ ಗುಹೆಯನ್ನು ಬಳಸುತ್ತಿದ್ದರು. ಇದೆ ಸಮಯದಲ್ಲಿ ಬಿಂಬಿಸಾರನೆನ್ನುವವನೊಬ್ಬನು ತನ್ನ ಅಪರಿಮಿತ ಪರಾಕ್ರಮದ ಮೂಲಕ 15 ನೇ ವಯಸ್ಸಿನಲ್ಲಿಯೆ ರಾಜನಾಗುತ್ತಾನೆ ಮತ್ತು […]