ಬಿಹಾರದ ನಿಗೂಢ ಗುಹೆಯಲ್ಲಿದೆ ಅಪರಿಮಿತ ಸ್ವರ್ಣ ಭಂಡಾರ? 1500 ವರ್ಷಗಳ ಹಿಂದಿನ ರಹಸ್ಯದಿಂದ ಪರದೆ ಸರಿಸಲು ಯಾರಿಂದಲೂ ಸಾಧ್ಯವಾಗಿಲ್ಲ!

ಬಿಹಾರದ ರಾಜ್‌ಗಿರ್‌ನಲ್ಲಿರುವ ವೈಭಾರ್ ಬೆಟ್ಟಗಳಲ್ಲಿ ಮಾನವ ನಿರ್ಮಿತ ಗುಹೆಗಳು ಸಾವಿರಾರು ವರ್ಷಗಳಿಂದಲೂ ಜನರನ್ನು ಆಕರ್ಷಿಸುತ್ತಿದೆ. ಸ್ವರ್ಣ ಭಂಡಾರವೆನ್ನುವ ಹೆಸರಿನಿಂದ ಕರೆಸಿಕೊಳ್ಳುವ ಈ ಗುಹೆಯಲ್ಲಿ ಲೆಕ್ಕವಿಲ್ಲದಷ್ಟು ಅತ್ಯಮೂಲ್ಯ ಸ್ವರ್ಣದ ಖಜಾನೆಯನ್ನು ಬಚ್ಚಿಡಲಾಗಿದೆ ಎನ್ನುವುದೇ ಈ ಗುಹೆಯನ್ನು ಸಹಸ್ರಾರು ಜನರನ್ನು ಇತ್ತ ಆಕರ್ಷಿಸುತ್ತಿರುವುದು.

On a treasure hunt in the Son Bhandar Caves of Bihar, Rajgir - Times of  India Travel

ದಂತಕಥೆಗಳ ಪ್ರಕಾರ ಈ ಗುಹೆಯನ್ನು ವೈರದೇವ ಎಂಬ ಜೈನ ಸನ್ಯಾಸಿಯೊಬ್ಬರು ನಿರ್ಮಿಸಿದ್ದು, ತನ್ನ ಧ್ಯಾನಕ್ಕಾಗಿ ಈ ಗುಹೆಯನ್ನು ಬಳಸುತ್ತಿದ್ದರು. ಇದೆ ಸಮಯದಲ್ಲಿ ಬಿಂಬಿಸಾರನೆನ್ನುವವನೊಬ್ಬನು ತನ್ನ ಅಪರಿಮಿತ ಪರಾಕ್ರಮದ ಮೂಲಕ 15 ನೇ ವಯಸ್ಸಿನಲ್ಲಿಯೆ ರಾಜನಾಗುತ್ತಾನೆ ಮತ್ತು ರಾಜ್ಯವನ್ನು ಹಂತಹಂತವಾಗಿ ವಿಸ್ತರಿಸುತ್ತಾ ಸಾಮ್ರಾಜ್ಯವನ್ನು ಕಟ್ಟುತ್ತಾನೆ. ಈತನ ಆಡಳಿತದಲ್ಲಿ ಪಾಟಲಿಪುತ್ರವನ್ನು ರಾಜಧಾನಿಯಾಗಿ ಹೊಂದಿದ್ದ ಆತನ ಸಾಮ್ರಾಜ್ಯವು ಸಂಪದ್ಭರಿತವಾಗಿರುತ್ತದೆ. ಪ್ರಜಾವತ್ಸಲನಾದ ರಾಜ ದಾನ ಧರ್ಮಾದಿ ಕಾರ್ಯಗಳನ್ನು ಮಾಡುತ್ತ ಜನರ ಪ್ರೀತಿ ಪಾತ್ರನಾಗುತ್ತಾನೆ.

Hidden Treasure Of Magadha Empire Bimbisara In Son Bhandar Caves Rajgir -  सोनभद्र की तरह बिहार में भी है एक स्वर्ण भंडार, अंग्रेजों की तोप भी नहीं  उड़ा पाई गुफा का दरवाजा -

ಆದರೆ ರಾಜ ಬಿಂಬಿಸಾರನ ಮಗ ಅಜಾತಶತ್ರು ಬಹಳ ಮಹತ್ವಾಕಾಂಕ್ಷಿ. ಈತನಿಗೆ ತನ್ನ ತಂದೆಯು ಹಿಂದೂ, ಬೌದ್ಧ ಮತ್ತು ಜೈನ ಸನ್ಯಾಸಿಗಳಿಗೆ ಸಂಪತ್ತನ್ನು ದಾನ ಮಾಡುವ ತನ್ನ ತಂದೆಯ ಗುಣ ಹಿಡಿಸುವುದಿಲ್ಲವಾದ್ದರಿಂದ ವೃದ್ದನಾದ ತನ್ನ ತಂದೆಯನ್ನು ಸಿಂಹಾಸನದಿಂದ ಪದಚ್ಯುತಿಗೊಳಿಸಿ ಕಾರಾಗೃಹದಲ್ಲಿ ಬಂಧಿಸುತ್ತಾನೆ. ಬಿಂಬಿಸಾರನ ಮಡದಿ, ಅಜಾತಶತ್ರುವಿನ ತಾಯಿ ಮಗಧ ಸಾಮ್ರಾಜ್ಯದ ಅದ್ಭುತ ಮತ್ತು ಅಪರೂಪದ ಸಂಪತ್ತನ್ನು ಈ ಗುಹೆಯಲ್ಲಿ ಅಡಗಿಸಿಟ್ಟಳು ಎಂದು ಕಥೆಗಳು ಹೇಳುತ್ತವೆ.

The Mysterious Caves Of Son Bhandar - HubPages

ಬೆಟ್ಟದ ತಪ್ಪಲಿನಲ್ಲಿ ಎರಡು ಗುಹೆಗಳಿದ್ದು, ಇದರಲ್ಲಿ ಒಂದರ ಒಳಗೆ ಚಿನ್ನದ ಭಂಡಾರವಿದ್ದು, ಅದರೊಳಗೆ ಪ್ರವೇಶಿಸಬೇಕಿದ್ದಲ್ಲಿ ಅಲ್ಲಿಯೆ ಗುಹೆಯಲ್ಲಿ ಬರೆದಿರುವ ನಿಗೂಢವಾದ ಸಂಕೇತಭಾಷೆಯನ್ನು ವಿಸಂಕೇತಿಸಬೇಕು ಎನ್ನಲಾಗುತ್ತದೆ. ಗುಹೆಗಳು ಸರಳ ಆದರೆ ನುಣ್ಣಗೆ ಹೊಳಪು ಹೊಂದಿದ್ದು, 1500 ವರ್ಷಗಳ ಹಿಂದೆ ಇದನ್ನು ಹೇಗೆ ಸಾಧಿಸಲಾಯಿತು ಎಂಬುದು ವಿದ್ವಾಂಸರಿಗೂ ಬಿಡಿಸಲಾಗದ ಒಗಟಾಗಿದೆ. ಗುಹೆಯೊಳಗೆ ಕೆಲವು ಧಾರ್ಮಿಕ ಶಿಲ್ಪಗಳಿವೆ. ತಲೆಮಾರುಗಳ ಕಥೆಯ ಪ್ರಕಾರ, ಒಬ್ಬರು ಈ ಬಾಗಿಲನ್ನು ತೆರೆದರೆ ಅದು ಅವರನ್ನು ಬೆಟ್ಟಗಳ ಮೂಲಕ ಸುರಂಗದ ಮೂಲಕ ಇನ್ನೊಂದು ಬದಿಯಲ್ಲಿರುವ ಸಪ್ತಪರ್ಣಿ ಗುಹೆಗಳಿಗೆ ಸಂಪರ್ಕಿಸುತ್ತದೆ. ಗುಹೆಯ ಕೊಠಡಿಯು ಆಯತಾಕಾರವಾಗಿದ್ದು, 1.5 ಮೀಟರ್‌ಗಳಷ್ಟು ಎತ್ತರದ ಮೇಲ್ಛಾವಣಿಯನ್ನು ಹೊಂದಿದೆ. ಗೋಡೆಯಲ್ಲಿ ಬಾಗಿಲಿನ ಚಿತ್ರ ಮತ್ತು ಅದರ ಪಕ್ಕದಲ್ಲೇ ಶಂಖಲಿಪಿಯಲ್ಲಿ ಬರೆದಿರುವ ಮಂತ್ರವಿದೆ. ಈ ಮಂತ್ರವನ್ನು ವಿಸಂಕೇತಿಸಿದಲ್ಲಿ ಬಾಗಿಲು ತೆರೆದುಕೊಳ್ಳುತ್ತದೆ ಎನ್ನಲಾಗುತ್ತದೆ. ಆದರೆ ಇದುವರೆಗೂ ಯಾರಿಗೂ ಈ ಲಿಪಿಯನ್ನು ವಿಸಂಕೇತಿಸುವುದು ಸಾಧ್ಯವಾಗಿಲ್ಲ.

ಮುಘಲ ಮತ್ತು ಬ್ರಿಟಿಷರಿಗೂ ಸಿಗಲಿಲ್ಲ ಸ್ವರ್ಣ ಭಂಡಾರ

Sonbhandar Caves in Nalanda | Bihar Tourism

ಸ್ವರ್ಣ ಭಂಡಾರ ಗುಹೆಗಳ ಕಥೆಗಳು ಮುಘಲರನ್ನು ಮತ್ತು ಬ್ರಿಟಿಷರನ್ನೂ ಆಕರ್ಷಿಸಿದ್ದವು. ಮೊದಲಿಗೆ ಮುಘಲರು ಈ ಗುಹೆಯನ್ನೆಲ್ಲಾ ತಡಕಾಡಿದರೂ ಅವರಿಗೆ ಒಂದು ಸಣ್ಣ ಸುಳಿವೂ ಕೂಡಾ ಬಿಟ್ಟುಕೊಡಲಿಲ್ಲ ಈ ಗುಹೆ. ಆ ಬಳಿಕ ಬ್ರಿಟಿಷರೂ ತಮ್ಮ ತೋಪು ಫಿರಂಗಿಗಳಿಂದ ಈ ಗುಹೆಯನ್ನೊಡೆಯಲು ಸಾಕಷ್ಟು ಪ್ರಯತ್ನ ಪಟ್ಟರೂ, ಈ ಗುಹೆಯನ್ನು ಬೇಧಿಸುವುದು ಅವರಿಂದಲೂ ಸಾಧ್ಯವಾಗುವುದಿಲ್ಲ. ಇದುವರೆಗೆ ಯಾವುದೇ ಅತ್ಯಾಧುನಿಕ ತಂತ್ರಜ್ಞಾದ ಮೂಲಕವೂ ಗುಹೆಯೊಳಗೆ ಏನಿದೆ ಎನ್ನುವುದನ್ನು ಪತ್ತೆಮಾಡಲಾಗಿಲ್ಲ. ಈ ಎಲ್ಲಾ ವಿಚಾರಗಳೆ ಈ ಗುಹೆಯನ್ನು ಮತ್ತಷ್ಟು ನಿಗೂಢವಾಗಿಸಿದೆ. ಇದೇ ಕಾರಣಕ್ಕೆ ಈ ಗುಹೆಯೊಳಗೆ ಸ್ವರ್ಣ ಭಂಡಾರವಿರಬೇಕು ಎಂದು ಜನರು ನಂಬುತ್ತಾರೆ. ಸತ್ಯ ಏನೆಂಬುದು ಗೊತ್ತಿರುವುದು ಬಹುಶಃ ರಾಜ ಬಿಂಬಿಸಾರನ ಮಡದಿ ಮತ್ತು ಜೈನ ಸನ್ಯಾಸಿ ವೈರದೇವರಿಗೆ ಮಾತ್ರ!

ಚಿತ್ರಕೃಪೆ: ಇಂಟರ್ನೆಟ್