ತೆಂಕುಪೇಟೆ ನೂತನ ಸುಬ್ರಹ್ಮಣ್ಯ ಮಠದ ನಿರ್ಮಾಣಕ್ಕೆ ಶಂಕುಸ್ಥಾಪನೆ
ಉಡುಪಿ: ಇಲ್ಲಿನ ತೆಂಕುಪೇಟೆಯಲ್ಲಿರುವ ಸುಬ್ರಹ್ಮಣ್ಯ ಮಠದ ನಿವೇಶನದಲ್ಲಿ ಸುಬ್ರಹ್ಮಣ್ಯ ಮಠಾಧೀಶರಾದ ಶ್ರೀ ವಿದ್ಯಾಪ್ರಸನ್ನತೀರ್ಥ ಶ್ರೀಪಾದರು ಹಾಗೂ ಸೋದೆ ಮಠಾಧೀಶರಾದ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ನೂತನ ಸುಬ್ರಹ್ಮಣ್ಯ ಮಠದ ನಿರ್ಮಾಣಕ್ಕೆ ಶಂಕುಸ್ಥಾಪನೆಯನ್ನು ನೆರವೇರಿಸಿದರು.ಈ ಸಂದರ್ಭದಲ್ಲಿ ಪ್ರಮುಖರಾದ ರತ್ನಕುಮಾರ್, ಡಾ.ವ್ಯಾಸರಾಜ ತಂತ್ರಿ, ಮಟ್ಟು ಲಕ್ಷ್ಮೀನಾರಾಯಣ ರಾವ್, ವಿಶ್ವನಾಥ ಭಟ್ ಕೊಡವೂರು, ಶ್ರೀಧರ ಭಟ್, ಶಾಂತ ಎಲೆಕ್ಟ್ರಿಕಲ್ಸಿನ ಶ್ರೀಪತಿ ಭಟ್, ಏಸ್ ಕನ್ಸಲ್ಟೆಂಟಿನ ರಾಜೇಂದ್ರ ಮಯ್ಯ, ಶ್ರೀವತ್ಸ ಆಚಾರ್ಯ, ವಿಷ್ಣು ಪಾಡಿಗಾರ್, ಸುಬ್ರಹ್ಮಣ್ಯ ಸಾಮಗ, ಮಧುಕರ ಮುದ್ರಾಡಿ ಮೊದಲಾದವರು ಉಪಸ್ಥಿತರಿದ್ದರು.
ಕಡಿಯಾಳಿ ಶ್ರೀ ಮಹಿಷ ಮರ್ದಿನಿ ದೇವಸ್ಥಾನ: ನೂತನ ಶರ್ವಾಣಿ ಮಂಟಪ, ಯಾಗ ಶಾಲೆ ಲೋಕಾರ್ಪಣೆ
ಕಡಿಯಾಳಿ: ಶ್ರೀ ಮಹಿಷ ಮರ್ದಿನಿ ದೇವಸ್ಥಾನದ ನೂತನ ಶರ್ವಾಣಿ ಮಂಟಪ ಮತ್ತು ಯಾಗ ಶಾಲೆಯು ಸೆಪ್ಟೆಂಬರ್ 26 ರಂದು ಸಂಜೆ 5:30 ಗಂಟೆಗೆ ಲೋಕಾರ್ಪಣೆಗೊಳ್ಳಲಿದೆ. ಈ ಸಂದರ್ಭದಲ್ಲಿ ಸೋದೆ ಮಠಾಧೀಶರಾದ ವಿಶ್ವವಲ್ಲಭ ಶ್ರೀಪಾದರು ಉಪಸ್ಥಿತರಿದ್ದು, ಆಶೀರ್ವಚನ ನೀಡಲಿದ್ದಾರೆ. ನೂತನ ಶರ್ವಾಣಿ ಮಂಟಪವನ್ನು ಉಡುಪಿ ಶಾಸಕ ಕೆ. ರಘುಪತಿ ಭಟ್ ಉದ್ಘಾಟಿಸಲಿದ್ದಾರೆ. ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ನಾಗೇಶ್ ಹೆಗ್ಡೆ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಪುರುಷೋತ್ತಮ ಶೆಟ್ಟಿ, ಕರಾವಳಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ನಗರಸಭಾ […]
ಪಣಂಬೂರು ವೆಂಕಟ್ರಾಯ ಐತಾಳ ಸಾಂಸ್ಕ್ರತಿಕ ಪ್ರತಿಷ್ಠಾನದ 5ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ
ಪ್ರತಿಷ್ಠಾನದ ವಿದ್ಯಾರ್ಥಿಗಳಿಂದ ‘ಶ್ರೀ ದೇವಿ ಮಹಾತ್ಮೆ’ ಯಕ್ಷಗಾನ ಪ್ರದರ್ಶನ ಉಡುಪಿ: ಪಣಂಬೂರು ವೆಂಕಟ್ರಾಯ ಐತಾಳ ಸಾಂಸ್ಕ್ರತಿಕ ಪ್ರತಿಷ್ಠಾನದ ವತಿಯಿಂದ ನಡೆಯುತ್ತಿರುವ ಉಚಿತ ತೆಂಕುತಿಟ್ಟು ಯಕ್ಷಗಾನ ತರಗತಿಯು ಶ್ರೀ ಸೋದೆ ಮಠದ ಯತಿಗಳ ಕೃಪಾಶೀರ್ವಾದದಿಂದ ಯಶಸ್ವಿಯಾಗಿ ಐದು ಸಂವತ್ಸರಗಳನ್ನು ಪೂರೈಸಿದೆ. ಇದರ 5ನೇ ವರ್ಷದ ವಾರ್ಷಿಕೋತ್ಸವವು ಉಡುಪಿ ಶ್ರೀ ಕೃಷ್ಣಮಠದ ರಾಜಾಂಗಣದಲ್ಲಿ 30 ಏಪ್ರಿಲ್ 2022, ಶನಿವಾರದಂದು ಸಂಜೆ 7 ಗಂಟೆಗೆ ಜರುಗಲಿದೆ. ಈ ಪ್ರಯುಕ್ತ ಉಡುಪಿ ಶ್ರೀ ಕೃಷ್ಣ ಮಠದ ಪರ್ಯಾಯ ಶ್ರೀ ಕೃಷ್ಣಾಪುರ ಮಠದ ಶ್ರೀ […]