ತೆಂಕುಪೇಟೆ ನೂತನ ಸುಬ್ರಹ್ಮಣ್ಯ ಮಠದ ನಿರ್ಮಾಣಕ್ಕೆ ಶಂಕುಸ್ಥಾಪನೆ

ಉಡುಪಿ: ಇಲ್ಲಿನ ತೆಂಕುಪೇಟೆಯಲ್ಲಿರುವ ಸುಬ್ರಹ್ಮಣ್ಯ ಮಠದ ನಿವೇಶನದಲ್ಲಿ ಸುಬ್ರಹ್ಮಣ್ಯ ಮಠಾಧೀಶರಾದ ಶ್ರೀ ವಿದ್ಯಾಪ್ರಸನ್ನತೀರ್ಥ ಶ್ರೀಪಾದರು ಹಾಗೂ ಸೋದೆ ಮಠಾಧೀಶರಾದ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ನೂತನ ಸುಬ್ರಹ್ಮಣ್ಯ ಮಠದ ನಿರ್ಮಾಣಕ್ಕೆ ಶಂಕುಸ್ಥಾಪನೆಯನ್ನು ನೆರವೇರಿಸಿದರು.ಈ ಸಂದರ್ಭದಲ್ಲಿ ಪ್ರಮುಖರಾದ ರತ್ನಕುಮಾರ್, ಡಾ.ವ್ಯಾಸರಾಜ ತಂತ್ರಿ, ಮಟ್ಟು ಲಕ್ಷ್ಮೀನಾರಾಯಣ ರಾವ್, ವಿಶ್ವನಾಥ ಭಟ್ ಕೊಡವೂರು, ಶ್ರೀಧರ ಭಟ್, ಶಾಂತ ಎಲೆಕ್ಟ್ರಿಕಲ್ಸಿನ ಶ್ರೀಪತಿ ಭಟ್, ಏಸ್ ಕನ್ಸಲ್ಟೆಂಟಿನ ರಾಜೇಂದ್ರ ಮಯ್ಯ, ಶ್ರೀವತ್ಸ ಆಚಾರ್ಯ, ವಿಷ್ಣು ಪಾಡಿಗಾರ್, ಸುಬ್ರಹ್ಮಣ್ಯ ಸಾಮಗ, ಮಧುಕರ ಮುದ್ರಾಡಿ ಮೊದಲಾದವರು ಉಪಸ್ಥಿತರಿದ್ದರು.