ಕುಂದಾಪುರ: ಮಂದಾರ್ತಿ ದೇವಸ್ಥಾನಕ್ಕೆ ರಜತ ರಥ ಸಮರ್ಪಣೆ

ಕುಂದಾಪುರ: ಸ್ವಪ್ರಯತ್ನಕ್ಕೆ ದೇವರ ಅನುಗ್ರಹವಿರುತ್ತದೆ. ನಮ್ಮ ಪ್ರಯತ್ನಕ್ಕೆ ದೇವರ ಅನುಗ್ರಹ ಸೇರಿದಾಗ ಮಾತ್ರವೇ ಕಾರ್ಯ ಸಫಲವಾಗುತ್ತದೆ ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಹೇಳಿದರು. ಅವರು ಮಂಗಳವಾರ ಮಂದಾರ್ತಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ದಾನಿಗಳಾದ ಹೆಗ್ಗುಂಜೆ ಬಡಾಮನೆ ವಿಶ್ವನಾಥ ಹೆಗ್ಡೆ, ಹೆಗ್ಗುಂಜೆ ಚಾವಡಿಮನೆ ರುದ್ರಮ್ಮ ಹೆಗ್ಗಡ್ತಿ, ಅಮರನಾಥ ಶೆಟ್ಟಿ ಮತ್ತು ಕುಟುಂಬಸ್ಥರು ಸೇವಾ ರೂಪದಲ್ಲಿ ನೀಡಿದ ನೂತನ ರಜತ ರಥ ಲೋಕಾರ್ಪಣೆಗೊಳಿಸಿ ಆಶೀರ್ವಚನ ನೀಡಿದರು. ನಾವು ನೀಡಿದ್ದು, ಮಾಡಿದ್ದು ಎನ್ನುವುದಕ್ಕಿಂತ ದೇವರೇ ಮಾಡಿಸಿದ್ದು ಎನ್ನುವುದು ಅರ್ಥಪೂರ್ಣ. […]