ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ವಿಶ್ವರೂಪ ದರ್ಶನ
ಉಡುಪಿ: ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ಅಂಗವಾಗಿ ಆದಿತ್ಯವಾರ ಮುಂಜಾನೆ ವಿಶ್ವರೂಪ ದರ್ಶನ ಜರಗಿತು. ಸಾವಿರಾರು ಹಣತೆ ದೀಪಗಳ ನಡುವೆ ಮೂಡಿಬಂದ “ಭಾರತ್ ” ಹೂವಿನ ರಂಗವಲ್ಲಿ ಭಕ್ತರ ಮನ ಸೆಳೆಯಿತು. ಶ್ರೀ ದೇವರಿಗೆ ವಿಶೇಷ ಹೂವಿನ ಅಲಂಕಾರ ಹಾಗೂ ಮಹಾ ಪೂಜೆಯ ಬಳಿಕ ಪ್ರಸಾದ ವಿತರಣೆ ನಡೆಯಿತು ಆಡಳಿತ ಮೊಕ್ತೇಸರ ಕೆ. ಅನ೦ತಪದ್ಮನಾಭ ಕಿಣಿ, ಅರ್ಚಕ ಜಯದೇವ ಭಟ್, ಗಣಪತಿ ಭಟ್ ಹಾಗೂ ಆಡಳಿತ ಮ೦ಡಳಿಯ ಸದಸ್ಯರು ಮತ್ತು ಜಿ ಎಸ್ ಬಿ ಸಭಾ […]
ಶ್ರೀ ಲಕ್ಷ್ಮಿ ವೆಂಕಟೇಶ ದೇವಸ್ಥಾನದಲ್ಲಿ ದಿ. ರಾಘವೇಂದ್ರ ಭಟ್ ಜನ್ಮ ಶತಾಬ್ದಿ ಸಂಸ್ಮರಣೆ ಕಾರ್ಯಕ್ರಮ
ಉಡುಪಿ: ಶ್ರೀ ಲಕ್ಷ್ಮಿ ವೆಂಕಟೇಶ ದೇವಸ್ಥಾನದ ಪದ್ಮ ಸರೋವರದ ತಟದಲ್ಲಿ ನಿರ್ಮಿಸಿದ ವಿಶೇಷ ವೇದಿಕೆಯಲ್ಲಿ ಸೋಮವಾರ ಸಂಜೆ ಹಣತೆ ದೀಪಾಲಂಕಾರದೊಂದಿಗೆ ಮುಕ್ಕೋಟಿ ದ್ವಾದಶಿಯ ಶುಭ ಪರ್ವದಲ್ಲಿ ಗೌಡ ಸಾರಸ್ವತ ಯುವಕ ಮಂಡಳಿಯ ಸಂಯೋಜನೆಯಲ್ಲಿ ಶ್ರೀ ಕೃಷ್ಣ ಜ್ಯುವೆಲರಿ ಮಾರ್ಟ್, ಉಡುಪಿ ಇವರ ಪ್ರಾಯೋಜಕತ್ವದಲ್ಲಿ ದಿ| ರಾಘವೇಂದ್ರ ಭಟ್ ಉಡುಪಿ ಇವರ ಜನ್ಮ ಶತಾಬ್ದಿ ಸಂಸ್ಮರಣೆ ಕಾರ್ಯಕ್ರಮವು ಜರಗಿತು. ಮಹಾರಾಷ್ಟ್ರದ ಪ್ರಸಿದ್ಧ ಕಲಾವಿದರಾದ ಓಂ ಬೊಂಗಾನೆ ಇವರಿಂದ ಅಭಂಗವಾಣಿ ಕಾರ್ಯಕ್ರಮವು ಸೂರಜ್ ಗೊಂಧಲಿ ಹಾಗೂ ಶ್ರೀವತ್ಸ ಶರ್ಮಾ ಇವರ […]
ಕಲ್ಯಾಣಪುರ: ಶ್ರೀ ವೆಂಕಟರಮಣ ದೇವಸ್ಥಾನದ 94ನೇ ಭಜನಾ ಸಪ್ತಾಹ ಮಂಗಲೋತ್ಸವ ಸಂಪನ್ನ
ಕಲ್ಯಾಣಪುರ: ಇಲ್ಲಿನ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ 94ನೇ ಭಜನಾ ಸಪ್ತಾಹ ಮಂಗಲೋತ್ಸವ ಆದಿತ್ಯವಾರ ಸಂಪನ್ನಗೊಂಡಿತು. ದೇವಳದ ಆಡಳಿತ ಮೊಕ್ತೇಸರ ಅನಂತ ಪದ್ಮನಾಭ ಕಿಣಿಯವರ ಮಾರ್ಗದರ್ಶನದಲ್ಲಿ 1 ವಾರಗಳ ಕಾಲ ಊರ ಪರವೂರ ಸಂತ ಮಂಡಳಿ ಸಹಕಾರದೊಂದಿಗೆ ಅಹೋರಾತ್ರಿ ಭಜನೆ ಜರುಗಿತು. ದೇವಳದ ಪ್ರಧಾನ ಅರ್ಚಕ ಜಯದೇವ ಭಟ್ ಮತ್ತು ಗಣಪತಿ ಭಟ್ ಧಾರ್ಮಿಕ ಪೂಜಾ ವಿಧಾನಗಳನ್ನು ನೆರವೇರಿಸಿದರು. ಭಜನಾ ಸಮಿತಿ ಅಧ್ಯಕ್ಷ ಕೆ ತುಳಸೀದಾಸ್ ಕಿಣಿ, ಉಪಾಧ್ಯಕ್ಷ ಸೀತಾರಾಮ್ ಭಟ್ ಅರವಿಂದ ಬಾಳಿಗಾ, ದತ್ತತ್ರೇಯ ಕಿಣಿ, ವಿನೋದ್ […]
ಮೂಲ್ಕಿ ರವೀಂದ್ರ ಪ್ರಭು ಅವರಿಂದ ಭಕ್ತಿ ಸಂಗೀತ ಕ್ರಾಯಕ್ರಮ
ಉಡುಪಿ: ಕಲ್ಯಾಣಪುರದ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ 94 ನೇ ಭಜನಾ ಸಪ್ತಾಹ ಅಂಗವಾಗಿ ನವೆಂಬರ್ 28 ರಂದು ಮೂಲ್ಕಿ ರವೀಂದ್ರ ಪ್ರಭುರವರಿಂದ ಭಕ್ತಿ ಸಂಗೀತ ಕ್ರಾಯಕ್ರಮ ನಡೆಯಿತು. ಅವರನ್ನು ದೇವಳದ ವತಿಯಿಂದ ಗೌ ರವಿಸಲಾಯಿತು. ಬಳಿಕ ರಾತ್ರಿ ಶ್ರೀದೇವರ ಪೇಟೆ ಉತ್ಸವ ವಸಂತಪೂಜೆ , ಅಷ್ಟಾವಧಾನ ಸೇವೆ, ತೊಟ್ಟಿಲು ಸೇವೆ, ಮಹಾಪೂಜೆಯನ್ನು ಅರ್ಚಕ ಜಯದೇವ ಭಟ್ ನೆರವೇರಿಸಿದರು. ಗಣಪತಿ ಭಟ್, ಆಡಳಿತ ಮೊಕ್ತೇಸರ ಅನಂತ ಪದ್ಮನಾಭ ಕಿಣಿ, ಕಾಶೀನಾಥ್ ಭಟ್ ಹಾಗೂ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು. ಊರ […]
ಕಲ್ಯಾಣಪುರ: ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ವಾರ್ಷಿಕ ದೀಪೋತ್ಸವ
ಕಲ್ಯಾಣಪುರ: ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ವಾರ್ಷಿಕ ದೀಪೋತ್ಸವ ಬುಧವಾರ ಹಾಗೂ ಗುರುವಾರದಂದು ಸಂಪನ್ನವಾಯಿತು. ದೇವರ ಸನ್ನಿಧಿಯಲ್ಲಿ ಸಾವಿರಾರು ಹಣತೆಗಳ ದೀಪಗಳಿಂದ ಅಲಂಕೃತವಾದ ಕೆರೆ ದೀಪ ಉತ್ಸವ, ಬಳಿಕ ಪೇಟೆ ಉತ್ಸವ ನೆರವೇರಿತು. ದೇವರಿಗೆ ವಿಶೇಷ ಹೂವಿನ ಅಲಂಕಾರ ಹಾಗು ಮಹಾ ಪೂಜೆಯ ಬಳಿಕ ಪ್ರಸಾದ ವಿತರಣೆ ನಡೆಯತು. ಆಡಳಿತ ಮೊಕ್ತೇಸರ ಕೆ ಅನ೦ತಪದ್ಮನಾಭ ಕಿಣಿ ಅರ್ಚಕರಾದ ಜಯದೇವ ಭಟ್, ಗಣಪತಿ ಭಟ್ ಹಾಗೂ ಆಡಳಿತ ಮ೦ಡಳಿಯ ಸದಸ್ಯರು ಮತ್ತು ಸಮಾಜ ಬಾ೦ಧವರು ಈ ಸ೦ದರ್ಭದಲ್ಲಿ ಉಪಸ್ಥಿತರಿದ್ದರು.