ಶ್ರೀ ರಾಘವೇಂದ್ರ ಮಠದ ಸಂಸ್ಥಾಪನಾ ರಜತ ಮಹೋತ್ಸವ ಸಂಭ್ರಮ: ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದಂಗಳವರ ತುಲಾಭಾರ ಕಾರ್ಯಕ್ರಮ
ಆತ್ಮೀಯ ಗುರುಭಕ್ತರೇ, ಶ್ರೀಮತ್ ಶುಭಕೃತ್ ನಾಮ ಸಂವತ್ಸರದ ಆಷಾಢ ಮಾಸ ಕೃಷ್ಣ ಪಕ್ಷದ ದಶಮಿ ತಾ. 23-07-2022ನೇ ಶನಿವಾರದಂದು ಕೀರ್ತಿ ಶೇಷ ಶ್ರೀ ವಾದೀಶ ಆಚಾರ್ಯರ ಪುಣ್ಯ ಸ್ಮರಣೆಯೊಂದಿಗೆ ಶ್ರೀ ಹರಿವಾಯು ಗುರುಗಳ ಪರಮ ಸನ್ನಿಧಾನವಾದ ಶ್ರೀ ಮಠದ ಸಂಸ್ಥಾಪನಾ ರಜತ ಮಹೋತ್ಸವ ಸಂಭ್ರಮ ಹಾಗೂ ಪುತ್ತಿಗೆ ಮಠಾಧೀಶರಾದ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದಂಗಳವರ ಷಷ್ಟ್ಯಬ್ಧಿ ಪ್ರಯುಕ್ತ ಶ್ರೀಗಳಿಗೆ “ತುಲಾಭಾರ”ವು ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿರುವುದು. ಭಕ್ತಾಭಿಮಾನಿಗಳಾದ ತಾವೆಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಗುರುಗಳಿಂದ […]