ಶ್ರೀ ರಾಘವೇಂದ್ರ ಮಠದ ಸಂಸ್ಥಾಪನಾ ರಜತ ಮಹೋತ್ಸವ ಸಂಭ್ರಮ: ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದಂಗಳವರ ತುಲಾಭಾರ ಕಾರ್ಯಕ್ರಮ

ಆತ್ಮೀಯ ಗುರುಭಕ್ತರೇ,

ಶ್ರೀಮತ್ ಶುಭಕೃತ್ ನಾಮ ಸಂವತ್ಸರದ ಆಷಾಢ ಮಾಸ ಕೃಷ್ಣ ಪಕ್ಷದ ದಶಮಿ ತಾ. 23-07-2022ನೇ ಶನಿವಾರದಂದು ಕೀರ್ತಿ ಶೇಷ ಶ್ರೀ ವಾದೀಶ ಆಚಾರ್ಯರ ಪುಣ್ಯ ಸ್ಮರಣೆಯೊಂದಿಗೆ ಶ್ರೀ ಹರಿವಾಯು ಗುರುಗಳ ಪರಮ ಸನ್ನಿಧಾನವಾದ ಶ್ರೀ ಮಠದ ಸಂಸ್ಥಾಪನಾ ರಜತ ಮಹೋತ್ಸವ ಸಂಭ್ರಮ ಹಾಗೂ ಪುತ್ತಿಗೆ ಮಠಾಧೀಶರಾದ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದಂಗಳವರ ಷಷ್ಟ್ಯಬ್ಧಿ ಪ್ರಯುಕ್ತ ಶ್ರೀಗಳಿಗೆ “ತುಲಾಭಾರ”ವು ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿರುವುದು.

ಭಕ್ತಾಭಿಮಾನಿಗಳಾದ ತಾವೆಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಗುರುಗಳಿಂದ ಫಲ ಮಂತ್ರಾಕ್ಷತೆಯನ್ನು ಸ್ವೀಕರಿಸಿ, ಶ್ರೀ ಹರಿವಾಯು ಗುರುಗಳ ಕೃಪೆಗೆ ಪಾತ್ರರಾಗಬೇಕಾಗಿ ಅಪೇಕ್ಷಿಸುವ, ರಜತ ಮಹೋತ್ಸವ ಸಮಿತಿ ಶ್ರೀ ರಾಘವೇಂದ್ರ ಮಠ, ಕುಳಾಯಿ ಹೊಸಬೆಟ್ಟು.

ಈ ಕಾರ್ಯಕ್ರಮಕ್ಕೆ ಧನ ಸಹಾಯ ಮಾಡಲಿಚ್ಚಿಸುವವರು A/c.No.71080100001112, Name: Nava Vrindavana Seva Prathistana IFSC-BARBOVJHOBE Bank of Baroda, Hosabettu ನೀಡಬೇಕಾಗಿ ವಿನಂತಿ.

ಕಾರ್ಯಕ್ರಮಗಳ ವಿವರ

ಬೆಳಿಗ್ಗೆ 6 ಗಂಟೆಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಪುತ್ತಿಗೆ ಮಠದ ಪಟ್ಟದ ದೇವರ ಪೂಜೆ, ಶ್ರೀಹರಿವಾಯು ಗುರುಗಳ ಮಹಾಪೂಜೆ ಮಧ್ಯಾಹ್ನ 1.00 ರಿಂದ “ಅನ್ನ ಸಂತರ್ಪಣೆ”

ಸಭಾ ಕಾರ್ಯಕ್ರಮ

ಸಂಜೆ ಗಂಟೆ 4-00 ರಿಂದ ದಿವ್ಯ ಸಾನಿಧ್ಯ: ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದಂಗಳವರು ಜಗದ್ಗುರು ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ, ಶ್ರೀ ಪುತ್ತಿಗೆ ಮಠ ಶ್ರೀ ಮದುಪೇಂದ್ರ ತೀರ್ಥ ಸಂಸ್ಥಾನ ರಜತ ಪೀಠಪುರ ಉಡುಪಿ.
ಅಧ್ಯಕ್ಷರು: ಧರ್ಮದರ್ಶಿ ಶ್ರೀ ಡಾ. ಹರಿಕೃಷ್ಣ ಪುನರೂರು ಮಾಜಿ ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ತು.
ಮುಖ್ಯ ಅತಿಥಿಗಳು: ಶ್ರೀ ಲಕ್ಷ್ಮೀ ನಾರಾಯಣ ಆಸ್ರಣ್ಣ ಪ್ರಧಾನ ಅರ್ಚಕರು, ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ, ಶ್ರೀ ಕ್ಷೇತ್ರ ಕಟೀಲು.
ಶ್ರೀ ಶರವು ರಾಘವೇಂದ್ರ ಶಾಸ್ತ್ರಿ ಶಿಲೆಶಿಲೆ ಆಡಳಿತ ಮೊಕ್ತೇಸರರು, ಶರವು ಶ್ರೀ ಮಹಾಗಣಪತಿ ದೇವಸ್ಥಾನ, ಮಂಗಳೂರು.
ಶ್ರೀ ಡಾ. ಭರತ್ ಶೆಟ್ಟಿ ವಿಧಾನ ಸಭಾ ಸದಸ್ಯರು, ಮಂಗಳೂರು ಉತ್ತರ ಕ್ಷೇತ್ರ.
ಶ್ರೀ ಯಶ್ ಪಾಲ್ ಸುವರ್ಣ ಪ್ರಧಾನ ಕಾರ್ಯದರ್ಶಿ ಬಿ.ಜೆ.ಪಿ. ರಾಷ್ಟ್ರೀಯ ಹಿಂದುಳಿದ ವರ್ಗಗಳ ಮೋರ್ಚಾ.
ಶ್ರೀ ವರುಣ್ ಚೌಟ ಸದಸ್ಯರು ಮ.ನ.ಪ.

ಶ್ರೀ ಪಾದಂಗಳವರ ಷಷ್ಟಿಪೂರ್ತಿ ಸಂಭ್ರಮಾಚರಣೆಯಲ್ಲಿ ತುಲಾಭಾರ-ಗುರು ಭಕ್ತಿ ಸಮರ್ಪಣೆ

ಸಂಜೆ 6-00 ರಿಂದ ಸಾಂಸ್ಕೃತಿಕ ಕಾರ್ಯಕ್ರಮ ಶ್ರೀ ವಿಠಲ್ ನಾಯಕ್ ವಿಟ್ಲ ಇವರ ತಂಡದಿಂದ
ಗೀತಾ ಸಾಹಿತ್ಯ ಸಂಭ್ರಮ

ಹೊರೆ ಕಾಣಿಕೆ ಸಮರ್ಪಿಸುವವರು ದಿ: 21-07-2022ರ ಸಂಜೆಯ ಒಳಗೆ ಮಠಕ್ಕೆ ತಲುಪಿಸಬೇಕಾಗಿ ವಿನಂತಿ.

-ನವ ವೃಂದಾವನ ಸೇವಾ ಪ್ರತಿಷ್ಟಾನ (ರಿ.) ಶ್ರೀ ರಾಘವೇಂದ್ರ ಮಠ ಕುಳಾಯಿ ಹೊಸಬೆಟ್ಟು – 575019.