ಉದ್ಯೋಗದಿಂದ ಸಿಗುವ ಜೀವನ ಭದ್ರತೆಯು ಸಮಾಜಕ್ಕೆ ಬೆಳಕು ನೀಡುತ್ತದೆ: ಪ್ರಕಾಶ್ ಅಮ್ಮಣ್ಣಾಯ

ಉಡುಪಿ: ಕೊಡವೂರು ಶ್ರೀ ಭಗವಾನ್ ನಿತ್ಯಾನಂದ ಸ್ವಾಮಿ ಮಂದಿರ ಮಠ ಆಶ್ರಯದಲ್ಲಿ, ಕೊಡವೂರು ವಾರ್ಡ್ ಅಭಿವೃದ್ದಿ ಸಮಿತಿ ಮತ್ತು ರಾಷ್ಟ್ರೀಯ ಪದವಿ ಪೂರ್ವ ವಿದ್ಯಾರ್ಥಿಗಳ, ಪೋಷಕರ ಮತ್ತು ಶಿಕ್ಷಕರ ಸಂಘ ಇವರ ಸಹಯೋಗದಲ್ಲಿ ಉಡುಪಿಯ ನಿತ್ಯಾನಂದ ಮಠ ಮಂದಿರದಲ್ಲಿ 7ನೇಯ ಮಿನಿ ಉದ್ಯೋಗ ಮೇಳ ನಡೆಯಿತು. ಖ್ಯಾತ ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿ, ಉದ್ಯೋಗ ಯುವಕರಿಗೆ ಭದ್ರತೆಯನ್ನು ನೀಡುತ್ತದೆ ಮತ್ತು ಈ ಭದ್ರತೆಯಿಂದ ಸಮಾಜಕ್ಕೆ ಬೆಳಕಾಗುತ್ತದೆ. ನ್ಯಾಯ ನೀತಿ ಧರ್ಮದಲ್ಲಿ ನಡೆದಾಗ ನಮಗೆ ಜೀವನದಲ್ಲಿ […]

ಜ.29 ರಂದು ಮಿನಿ ಉದ್ಯೋಗ ಮೇಳ

ಉಡುಪಿ: ಸ್ವಾವಲಂಬಿ ಭಾರತ ಉಡುಪಿ ಜಿಲ್ಲೆ, ಸೌತ್ ಕೆನರಾ ಫೋಟೋಗ್ರಫರ್ಸ್ ಅಸೋಸಿಯೇಶನ್ ಉಡುಪಿ ವಲಯ, ರಾಷ್ಟ್ರೀಯ ಪದವಿ ಪೂರ್ವ ವಿದ್ಯಾರ್ಥಿಗಳ, ಪೋಷಕರ ಮತ್ತು ಶಿಕ್ಷಕರ ಸಂಘದ ವತಿಯಿಂದ ಜ.29 ರಂದು ಮಧ್ಯಾಹ್ನ 3 ಗಂಟೆಗೆ ಉಡುಪಿಯ ಭಗವಾನ್ ನಿತ್ಯಾನಂದ ಸ್ವಾಮಿ ಮಂದಿರದಲ್ಲಿ ಮಿನಿ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ. ಕುಂದಾಪುರ, ಕಾರ್ಕಳ ಬೈಲೂರು ಮತ್ತು ಉಡುಪಿ ಪರಿಸರದಲ್ಲಿ ಸೈಟ್ ಸುಪರ್ವೈಸರ್, ಸಿವಿಲ್ ಇಂಜಿನಿಯರ್ ಮತ್ತು ರಿಲಯನ್ಸ್ ಸ್ಮಾರ್ಟ್ ಗೆ ಗ್ರಾಹಕ ಸೇವಾ ಸಹವರ್ತಿ ಮತ್ತು ಕ್ಯಾಷಿಯರ್ ಹುದ್ದೆಗಳಿಗೆ ಅಭ್ಯರ್ಥಿಗಳು […]

ಅಷ್ಟ ಮಠದ ಖ್ಯಾತಿಯ ಮುಕುಟಕ್ಕೆ ಮತ್ತೊಂದು ಗರಿ ಭಗವಾನ್ ನಿತ್ಯಾನಂದ ಮಂದಿರ: ಡಾ.ಎಚ್. ಎಸ್. ಬಲ್ಲಾಳ್

ಉಡುಪಿ: ನಗರದ ಕೆ.ಎಂ ಮಾರ್ಗದಲ್ಲಿರುವ ನಿತ್ಯಾನಂದ ಸ್ವಾಮಿ ಮಂದಿರ ಮಠವು ನವೀಕೃತಗೊಂಡಿದ್ದು ಜ.16 ರಂದು ಮಂದಿರ ಲೋಕಾರ್ಪಣೆ, ಗರ್ಭಗೃಹ ಸಮರ್ಪಣೆ, ಶ್ರೀ ಗುರುವರ್ಯರ ಪಂಚಲೋಹದ ವಿಗ್ರಹ ಪ್ರತಿಷ್ಠೆ ಕಾರ್ಯಕ್ರಮವು ಅದ್ದೂರಿಯಾಗಿ ಜರುಗಿತು. ಈ ಸಂದರ್ಭದಲ್ಲಿ ಮಾತನಾಡಿದ ಮಣಿಪಾಲ ಮಾಹೆ ವಿ.ವಿ. ಸಹಕುಲಾಧಿಪತಿ ಡಾ.ಎಚ್. ಎಸ್. ಬಲ್ಲಾಳ್, ಮಂದಿರದ ಜೊತೆ ಜೊತೆಗೆ ಶೈಕ್ಷಣಿಕ, ಹಾಗೂ ಆರೋಗ್ಯ ಸಂಸ್ಥೆಗಳು ಕೂಡಾ ಸ್ಥಾಪನೆಯಾಗಲಿ. ಅಷ್ಟ ಮಠಗಳಿಗೆ ಖ್ಯಾತಿ ಪಡೆದ ಉಡುಪಿ ನಗರದ ಮುಕುಟಕ್ಕೆ ಶ್ರೀ ಭಗವಾನ್ ನಿತ್ಯಾನಂದ ಮಂದಿರ ಇನ್ನೊಂದು ಗರಿ […]

ಭಗವಾನ್ ನಿತ್ಯಾನಂದ ಸ್ವಾಮಿ ಮಂದಿರ ಮಠದ ನವೀಕೃತ ಗರ್ಭಗೃಹ ಸಮರ್ಪಣೆ

ಉಡುಪಿ: ಶ್ರೀಭಗವಾನ್ ನಿತ್ಯಾನಂದ ಸ್ವಾಮಿ ಮಂದಿರ ಮಠದ ನವೀಕೃತ ಗರ್ಭಗೃಹ ಸಮರ್ಪಣೆ ಕಾರ್ಯಕ್ರಮ ಭಾನುವಾರ ಅತ್ಯಂತ‌ ವೈಭವದಿಂದ ದೇಗುಲದ ಆವರಣದಲ್ಲಿ ನಡೆಯಿತು. ಬಳಿಕ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ‌ ಆಶೀರ್ವಚನ ನೀಡಿದ ಮೂಡುಬಿದರೆ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಮನುಷ್ಯನ ಎಲ್ಲ ಕಾರ್ಯಗಳು ಚೆನ್ನಾಗಿ ನಡೆಯಬೇಕಾದರೆ ದೇವರ ಅನುಗ್ರಹ ಅಗತ್ಯವಾಗಿ ಬೇಕು. ದೇವರ ಪ್ರಾರ್ಥನೆ ಇಲ್ಲದೆ ಯಾವುದೇ ಕೆಲಸವೂ ಪೂರ್ಣ ವಾಗಲ್ಲ. ಭಗವಾನ್ ನಿತ್ಯಾನಂದರು ಸಾಮಾನ್ಯರ ಮನೆಯಲ್ಲಿ ಹುಟ್ಟಿ ಅಸಾಮಾನ್ಯ ವ್ಯಕ್ತಿತ್ವ ಹೊಂದಿದ್ದ ಓರ್ವ ಶ್ರೇಷ್ಠ ಸಂತ. […]

ಜ.16 ರಂದು ಶ್ರೀ ಭಗವಾನ್ ನಿತ್ಯಾನಂದ ಸ್ವಾಮಿ ನವೀಕೃತ ಮಂದಿರ ಮಠ ಲೋಕಾರ್ಪಣೆ; ವಿಗ್ರಹ ಪ್ರತಿಷ್ಠೆ

ಉಡುಪಿ: ನಗರದ ಕೆ.ಎಂ ಮಾರ್ಗದಲ್ಲಿ ಅಮೂಲಾಗ್ರ ಜೀರ್ಣೋದ್ಧಾರಗೊಂಡ ಶ್ರೀ ಭಗವಾನ್ ನಿತ್ಯಾನಂದ ಸ್ವಾಮಿ ಮಂದಿರ ಮಠದಲ್ಲಿ ಪ್ರತಿಷ್ಠಾಪಿಸಲ್ಪಡುವ ಶ್ರೀ ಗುರುವರ್ಯರ ಪಂಚಲೋಹದ ವಿಗ್ರಹದ ಮೆರವಣಿಗೆಯು ಜ 15 ರಂದು ನಡೆಯಲಿದ್ದು, ಜ 16 ರಂದು ನವೀಕೃತ ಮಂದಿರ ಲೋಕಾರ್ಪಣೆ, ಗರ್ಭಗೃಹ ಸಮರ್ಪಣೆ, ಗುರುಗಳ ವಿಗ್ರಹ ಪ್ರತಿಷ್ಠೆ ಧಾರ್ಮಿಕ ಸಭೆ, ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಲಿವೆ. ಮಂದಿರದ ಹಿನ್ನೆಲೆ ಉಡುಪಿ ಮೂಲದ ಮುಂಬಯಿ ನಿವಾಸಿ ಶ್ರೀ ನಿತ್ಯಾನಂದ ಸ್ವಾಮಿಯವರ ಭಕ್ತೆ ಸಾಧ್ವಿ ಸೀತಮ್ಮ ಶೆಟ್ಟಿಯವರು ಸದ್ಗುರು ಶ್ರೀ ಜನಾನಂದ […]