ನಾನು ಐದು ವರ್ಷದಲ್ಲಿ ತುಂಬಾ ಕೆಲಸ ಮಾಡಿದ್ದೇನೆ: ಶೋಭಾ ಕರಂದ್ಲಾಜೆ
ಕುಂದಾಪುರ: ಕಳೆದ ೭೦ ವರ್ಷಗಳಲ್ಲಿ ಆಗದಿರುವಂತಹ ಕೆಲಸವನ್ನು ನಾನು ಈ ೫ ವರ್ಷಗಳಲ್ಲಿ ಮಾಡಿದ್ದೇನೆ.ಇಷ್ಟನ್ನು ಇಲ್ಲಿ ಬೇರೆ ಯಾರೂ ಮಾಡಿಲ್ಲ ಎಂದು ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಹೇಳಿದರು.ಅವರು ಗುರುವಾರ ಕುಂದಾಪುರದ ಕೋರ್ಟ್‌ನಲ್ಲಿ ಬಾರ್ ಅಸೋಸಿಯೇಶನ್ ಸದಸ್ಯರ ಬಳಿ ಮತಯಾಚಿಸಿದ ಬಳಿಕ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ ಮಾತನಾಡಿದರು. ನಾನು ವೈಯಕ್ತಿಕವಾಗಿ ಯಾರ ಬಗ್ಗೆಯೂ ಟೀಕೆ ಮಾಡಿಲ್ಲ. ನಾನು ತಂದ ಅಭಿವೃದ್ಧಿ ವಿಚಾರಗಳ ಬಗ್ಗೆ ಮಾತ್ರವೇ ಮಾತನಾಡಿದ್ದೇನೆ. ಜಯಪ್ರಕಾಶ್ ಹೆಗ್ಡೆ ನಮ್ಮ ಪಕ್ಷದ ಹಿರಿಯ […]