ಬ್ರಹ್ಮಾವರದಲ್ಲಿ ಶಿಕ್ಷಕರ ಸಹಕಾರಿ ಸಂಘದ ನವೀಕೃತ ಶಾಖಾ ಕಚೇರಿ ಶುಭಾರಂಭ

ಉಡುಪಿ, ಜುಲೈ 8: ಮಂಗಳೂರು ಶಿಕ್ಷಕರ ಸಹಕಾರಿ ಕ್ರೆಡಿಟ್ ಸಂಘ, ನಿಯಮಿತ ಇದರ ಶಾಖೆಯು ಬ್ರಹ್ಮಾವರದ ಸೈಂಟ್ ಅಂತೋನಿ ಪ್ರೆಸ್ ಪಾಯಿಂಟ್‍ನ ಸ್ವಂತ ಕಟ್ಟಡದಲ್ಲಿ ಕಾರ್ಯಾರಂಭಗೊಂಡಿದ್ದು, ಈ ಶಾಖೆಯ ಸಂಘದ ಅಧ್ಯಕ್ಷರಾದ ಸಿ. ಪ್ರಭಾಕರ ಶೆಟ್ಟಿಯವರ ನೇತೃತ್ವದಲ್ಲಿ ನೂತನ ವಿನ್ಯಾಸದೊಂದಿಗೆ ನವೀಕರಣಗೊಂಡು ಜೂನ್ 16 ರಂದು ಶುಭಾರಂಭಗೊಂಡಿರುತ್ತದೆ. ಶಾಖೆಯಲ್ಲಿ 528 ಸದಸ್ಯರಿದ್ದು, ಸಂಘದಲ್ಲಿ ಒಟ್ಟು 4146 ಸದಸ್ಯರಿದ್ದಾರೆ. ಸಂಘದ ಒಟ್ಟು ವ್ಯವಹಾರ ಸುಮಾರು 65 ಕೋಟಿ ರೂ. ಆಗಿರುತ್ತದೆ. ಇದೀಗ ನವೀಕರಣಗೊಂಡಿರುವ ಸಂಘದ ಶಾಖಾ ಕಚೇರಿಯಲ್ಲಿ ಜಿಲ್ಲೆಯ ಶಿಕ್ಷಕ […]