ಇಂದು ಸಂಜೆ ಝೀ5 ನಲ್ಲಿ ಶೀತಲ್ ಶೆಟ್ಟಿ ಚೊಚ್ಚಲ ನಿರ್ದೇಶನದ ವಿಂಡೋ ಸೀಟ್ ಪ್ರದರ್ಶನ
ಇದು ನನ್ನ ಕಲ್ಪನೆಯ ತುಣುಕು, ನೀವೆಲ್ಲರೂ ನೋಡಲೆಂದು ನಾನು ತೆರೆಯ ಮೇಲೆ ತರಲು ಬಯಸಿದ್ದೇನೆ. ವಿಂಡೋ ಸೀಟ್ ನಾನು ತುಂಬಾ ಪ್ರೀತಿ ಮತ್ತು ಸಮರ್ಪಣೆಯಿಂದ ಮಾಡಿದ ಚಿತ್ರ. ನೀವೆಲ್ಲರೂ ಇದನ್ನು ಪ್ರೀತಿಯಿಂದ ವೀಕ್ಷಿಸಿದರೆ ನಾನು ಹೆಚ್ಚು ಕೃತಜ್ಞಳಾಗುತ್ತೇನೆ ಮತ್ತು ಚಿತ್ರವು ನಿಮ್ಮನ್ನು ನಿರಾಶೆಗೊಳಿಸುವುದಿಲ್ಲ ಎಂದು ನನಗೆ ಖಾತ್ರಿಯಿದೆ. ಥಿಯೇಟರಿನಲ್ಲಿ ಬಿಡುಗಡೆಯಾದ ನಂತರ ವಿಂಡೋ ಸೀಟ್ ಮೇಲೆ ನಿಮ್ಮೆಲ್ಲರ ಪ್ರೀತಿಯನ್ನು ಧಾರೆಯೆರೆದಿದ್ದಕ್ಕಾಗಿ ನಾನು ನಿಜವಾಗಿಯೂ ಕೃತಜ್ಞಳಾಗಿದ್ದೇನೆ. ಇದೀಗ ಚಿತ್ರವು ಝೀ5 ಮೂಲಕ ನಿಮ್ಮ ಮುಂದೆ ಬರುತ್ತಿದೆ. ದಯವಿಟ್ಟು ಚಂದಾದಾರರಾಗಿ, […]
ಬುಕ್ ಮೈ ಶೋ ವಿರುದ್ದ ನಿರ್ದೇಶಕಿ ಶೀತಲ್ ಶೆಟ್ಟಿ ಅಸಮಾಧಾನ: ಕನ್ನಡ ಚಿತ್ರಗಳಿಗೆ ಅನ್ಯಾಯದ ಗಂಭೀರ ಆರೋಪ
ಬೆಂಗಳೂರು: ಚಲನಚಿತ್ರಗಳನ್ನು ವೀಕ್ಷಿಸಲು ಥಿಯೇಟರ್ ನಲ್ಲಿ ಮುಂಗಡವಾಗಿ ಟಿಕೇತು ಖರೀದಿಸಿಡುವ ಆನ್ ಲೈನ್ ವೇದಿಕೆ ಬುಕ್ ಮೈ ಶೋ ಮೇಲೆ ನಿರ್ದೇಶಕಿ ಶೀತಲ್ ಶೆಟ್ಟಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ವೇದಿಕೆಯಲ್ಲಿ ಪ್ರೇಕ್ಷಕರ ವಿಮರ್ಶೆ ಮತ್ತು ಚಿತ್ರದ ರೇಟಿಂಗ್ ಗಳನ್ನು ತೋರಿಸಲು ಷರತ್ತುಗಳನ್ನು ವಿಧಿಸಿ ಕನ್ನಡ ಚಿತ್ರರಂಗಕ್ಕೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಹೊರಿಸಿದ್ದಾರೆ. ವೀಕ್ಷಕರು ವಿಮರ್ಶೆಗಳನ್ನು ನೋಡಿ ಚಿತ್ರ ನೋಡಲು ಮುಂದಾಗುತ್ತಾರೆ. ಆದರೆ ಇಲ್ಲಿ ವಿಮರ್ಶೆಗಳನ್ನು ಕಾಣದಂತೆ ಮಾಡಿರುವುದು ವಿಂಡೋ ಸೀಟ್ ನಿರ್ದೇಶಕಿಯ ಸಿಟ್ಟಿಗೆ ಕಾರಣವಾಗಿದೆ. […]
ಬೆಳ್ಳಿ ಪರದೆ ಮೇಲೆ ಶೀತಲ್ ಶೆಟ್ಟಿ ನಿರ್ದೇಶನದ ವಿಂಡೋ ಸೀಟ್
ಸುದ್ದಿ ನಿರೂಪಕಿ, ನಟಿ ಶೀತಲ್ ಶೆಟ್ಟಿ ಆಕ್ಷನ್ ಕಟ್ ಹೇಳಿರುವ ವಿಂಡೋ ಸೀಟ್ ಸಿನಿಮಾ ಬಿಡುಗಡೆ ಕಂಡಿದೆ. ಈ ಹಿಂದೆ ಕಿರುಚಿತ್ರ ನಿರ್ದೇಶಿಸಿದ್ದ ಶೀತಲ್ ಶೆಟ್ಟಿ ಈಗ ಕಥೆ ಹಾಗೂ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ವಿಂಡೋಸೀಟ್ ಎಂಬುದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವಿದು. ಚಿತ್ರದ ತಾರಾಗಣಲ್ಲಿ ನಿರೂಪ್ ಭಂಡಾರಿ, ಸಂಜನಾ ಆನಂದ್, ಅಮೃತ ಅಯ್ಯಂಗಾರ್ ಮುಂತಾದವರಿದ್ದಾರೆ. ರಘು ಪಾತ್ರ ನಿರ್ವಹಿಸುತ್ತಿರುವ ನಿರೂಪ್, ಅಮೃತಾ ಅಯ್ಯಂಗಾರ್ ನ ಅಂಜಲಿ ಎಂಬ ಪಾತ್ರದ ಮಾಲೀಕತ್ವದ ಹೈ-ಎಂಡ್ ರೆಸ್ಟೋರೆಂಟ್‌ನಲ್ಲಿ ಹಾಡುವ ಒಂಟಿ […]