ಉಡುಪಿ ಜನರ ಬಾಯಿಗೆ ಸೈಲೆಂಟಾಗಿ ರುಚಿ ಹತ್ತಿಸ್ತಿದೆ ಶೀನ ನಾಯ್ಕರು ತಯಾರಿಸೋ ಸ್ಪೆಷಲ್ ಗೋಲಿಸೋಡಾ!: ಒಮ್ಮೆ ಕುಡಿದು ನೋಡ, ಈ ಗೋಲಿ ಸೋಡ

ಮಳೆಗಾಲ ಮುಗಿದು ಚಳಿಗಾಲ ಆರಂಭವಾಗಿದೆ. ಸೂರ್ಯನ ತಾಪ ಮಾತ್ರ ಏರುತ್ತಿದ್ದು ಸೆಖೆಯೂ ಶುರುವಾಗಿದೆ. ಇದೀಗ ಬಿಸಿಲಿನ ತಾಪ ತಡೆಯಲಾಗದೇ ಜನರು ತಂಪುಪಾನೀಯದತ್ತ ಮುಖ ಮಾಡುತ್ತಿದ್ದಾರೆ. ಪೆಪ್ಸಿ ಕೋಲಾಗಳ  ಭರಾಟೆಯ ನಡುವೆಯೂ ಪಕ್ಕ ದೇಸೀ ತಂಪು ಗೋಲಿ‌ಸೋಡ ಸೈಲೆಂಟ್ ಸುದ್ದಿ ಮಾಡುತ್ತಿದೆ.ಹೀಗೆ ಗೋಲಿಸೋಡ ಮಾರುತ್ತಲೇ ಉಡುಪಿಯಲ್ಲಿ ಜನಜನಿತರಾದವರು ದೊಡ್ಡಣಗುಡ್ಡೆಯ ಶೀನ ನಾಯ್ಕರು. ಉಡುಪಿಯ ದೊಡ್ಡಣಗುಡ್ಡೆಯ ಶೀನ ನಾಯ್ಕರ  ಸಾಹಸಮಯ ಯಶೋಗಾಥೆಯನ್ನು ಕೇಳಿದರೆ ನಿಜಕ್ಕೂ ನೀವು ಹೆಮ್ಮೆ ಪಡುತ್ತೀರಾ. ಅವರ ವಯಸ್ಸು ಸರಿ ಸುಮಾರು ಎಪ್ಪತೈದು ವರ್ಷ. ಹಳೆಯ ಸೈಕಲ್‌ […]