ಅವಳೊಂದಿಗೆ ನನ್ನ ಚೇಷ್ಟೆಗಳು ಎಷ್ಟಿತ್ತೆಂದರೆ !:ಆಕೆ ಜತೆಗಿದ್ದರೆ ನಾನು ರಸಿಕರ ರಸಿಕ !
ಪ್ರೀತಿ ಹುಟ್ಟಲು ಅದು ಪಕ್ವಕಾಲವಾಗಿತ್ತೋ ಏನೋ. ಸೋನೆ ಮಳೆಯ ಆ ದಿನ ಪಿಯುಸಿಯ ಕನ್ನಡ ಪೀರಿಯಡ್ನಲ್ಲಿ ಪ್ರಾಧ್ಯಾಪಕರು ‘ಜೋಗ್ಯೋರ ಅಂಜಪ್ಪನ ಕೋಳೀ ಕತೆ’ ಅಂತ ಪಿಟೀಲು ಕುಯ್ಯುತ್ತಿದ್ದಾಗ ಪಕ್ಕಾ ತರಲೆ ನನ್ಮಗ ನಾನು ಕೊನೆಯ ಬೆಂಚಿಗಂಟಿಕೊಂಡು ಕಪಿಚೇಷ್ಟೆಯಲ್ಲಿ ತೊಡಗಿದ್ದೆ. ಉಪನ್ಯಾಸಕರು ತಿರುಗುವಾಗ ಪಾಠ ಆಲಿಸುವಂತೆ ಪೋಸು ಕೊಡುತ್ತಿದ್ದೆನಾದರೂ ಬಾಯಿ ನಿಲ್ಲದೆ ಸಣ್ಣ ಧ್ವನಿಯಲ್ಲಿ ನಿತೀಶ್, ನಾಗರಾಜ ಮತ್ತು ಮನು ಎಂಬ ನನ್ ತರ್ಲೆ ಗೆಳೆಯರ ಜೊತೆಗೆ ಹರಟೆಗಿಳಿದಿತ್ತು. ಎಸ್ಎಸ್ಎಲ್ಸಿಯ ಮ್ಯಾಥ್ಸ್ ನಲ್ಲಿ ಡುಮ್ಕಿ ಹೊಡೆದಿದ್ದ ಆಕೆ ರೀ […]