ಮಿಷನ್ ಕರ್ನಾಟಕ ಟು ಕಾಶಿ; ಕರ್ನಾಟಕದಿಂದ ವಾರಣಾಸಿಗೆ ಶೀಘ್ರವೆ ವಿಶೇಷ ರೈಲು: ಶಶಿಕಲಾ ಜೊಲ್ಲೆ

ಬೆಂಗಳೂರು: ರಾಜ್ಯ ಹಿಂದೂ ಧಾರ್ಮಿಕ ಹಾಗೂ ಧರ್ಮಾದಾಯ ದತ್ತಿಗಳ ಇಲಾಖೆಯು ವಾರಣಾಸಿಗೆ (ಕಾಶಿ) ವಿಶೇಷ ರೈಲನ್ನು ಆಯೋಜಿಸುತ್ತಿದ್ದು, ಪ್ರತಿ ವರ್ಷ 30,000 ಕಾಶಿ ಯಾತ್ರಾರ್ಥಿಗಳಿಗೆ ತಲಾ 5,000 ರೂ.ಗಳನ್ನು ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈಗಾಗಲೇ ರೈಲ್ವೆ ಸಚಿವರೊಂದಿಗೆ ಮಾತನಾಡಿದ್ದು, ಅವರ ಸಲಹೆಯಂತೆ ಭಾರತ್ ಗೌರವ್ ಪ್ರವಾಸೋದ್ಯಮ ಯೋಜನೆಯಡಿ 15 ವರ್ಷಗಳ ಕಾಲ ಸೇವೆ ಸಲ್ಲಿಸಿದ ಹಳೆಯ ರೈಲುಗಳನ್ನು ಪ್ರವಾಸೋದ್ಯಮಕ್ಕಾಗಿ ಗುತ್ತಿಗೆಗೆ ತೆಗೆದುಕೊಳ್ಳಲಾಗುವುದು. ಈ ರೈಲುಗಳ ನೋಂದಣಿಗಾಗಿ 1 ಲಕ್ಷ ರೂಪಾಯಿಯನ್ನು ಈಗಾಗಲೇ ಪಾವತಿಸಲಾಗಿದೆ. ಈ ರೈಲುಗಳು […]