ಕಾಲನ ಜೊತೆ ಜಿದ್ದಿಗೆ ಬಿದ್ದು ಕಾಲನಲ್ಲಿ ಲೀನರಾನ ಮಹಾನ್ ಚೇತನ ಶಂಕರ್ ನಾಗ್ ರವರ 68 ನೇ ಜನ್ಮ ದಿನ
ಇವತ್ತು ಕನ್ನಡ ಚಿತ್ರರಂಗದ ಯಶಸ್ಸನ್ನು ಕಂಡಾಗ ಪ್ರತಿಯೊಬ್ಬರ ಮನಸ್ಸಿನಲ್ಲೂ ಮೂಡುವ ವಿಚಾರ ಶಂಕರ್ ನಾಗ್ ಇದ್ದಿದ್ದರೆ ಈ ಯಶಸ್ಸು ಯಾವತ್ತೋ ಬಂದಿರುತ್ತಿತ್ತು. ಶಂಕರ್ ನಾಗ್ ಬರಿಯ ವ್ಯಕ್ತಿಯಲ್ಲ, ಅವರೊಂದು ಶಕ್ತಿ. ಅದಮ್ಯ ಚೈತನ್ಯ, ಎಂದಿಗೂ ಬತ್ತದ ಉತ್ಸಾಹ, ಕಾಲಕ್ಕಿಂತ ಒಂದು ಹೆಜ್ಜೆ ಮುಂದಿರಬೇಕೆನ್ನುವ ತುಡಿತ. ಕಾಲನ ಜೊತೆ ಜಿದ್ದಿಗೆ ಬಿದ್ದು ಕಾಲನಲ್ಲಿ ಲೀನರಾಗಿ 32 ವರ್ಷಗಳು ಸಂದರೂ ಶಂಕರ್ ನಾಗ್ ನೆನಪು ಎಳ್ಳಷ್ಟೂ ಮಾಸಿಲ್ಲ. ಅವರಿಂದು ನಮ್ಮ ಜೊತೆಗಿರುತ್ತಿದ್ದರೆ ಅವರಿಗೆ 68 ವರ್ಷ ತುಂಬುತ್ತಿತ್ತು. ಇಷ್ಟು ವರ್ಷಗಳಲ್ಲಿ […]