ಕುಂದಾಪುರ: ಒಂದು ದಿನವೂ ಅಂಗಡಿ ಬಂದ್ ಮಾಡದ ಆಚಾರ್ಯರ ಪೇಪರ್ ಅಂಗಡಿಯೂ ಬಂದ್!

ಶ್ರೀಕಾಂತ ಹೆಮ್ಮಾಡಿ ಕುಂದಾಪುರ: ಮೂರುವರೆ ದಶಕಗಳ ಸುದೀರ್ಘ ಸೇವೆಯಲ್ಲಿ ಒಂದು ದಿನವೂ ತಮ್ಮ ಅಂಗಡಿಯನ್ನು ಬಂದ್ ಮಾಡದ ಪೇಪರ್ ಏಜೆನ್ಸಿಯ ಶಂಕರ್ ಆಚಾರ್ಯರು ಸ್ವತಃ ಅಂಗಡಿಯನ್ನು ಬಂದ್ ಮಾಡಿ ಜನತಾ ಕರ್ಫ್ಯೂಗೆ ಸಂಪೂರ್ಣ ಬೆಂಬಲ ನೀಡಿ ವಿಶೇಷ ಗಮನಸೆಳೆದಿದ್ದಾರೆ. ೧೯೮೫ ರಲ್ಲಿ ಕುಂದಾಪುರದ ಹಳೆ ಬಸ್ ಸ್ಟ್ಯಾಂಡ್ ಬಳಿಯ ಕಟ್ಟಡದಲ್ಲಿ ಪೇಪರ್ ಏಜೆನ್ಸಿಯ ಅಂಗಡಿ ಆರಂಭಿಸಿದ ಶಂಕರ ಆಚಾರ್ಯರು ಅಂದಿನಿಂದಲೂ ಯಾವುದೇ ರಾಜಕೀಯ ಪಕ್ಷಗಳು, ವಿವಿಧ ಸಂಘಟನೆಗಳು ಏನೇ ಮುಖ್ಯವಾದ ಬೇಡಿಕೆ ಇಟ್ಟು ಬಂದ್ ನಡೆಸಿದರೂ ಬೆಂಬಲ […]